MANGALORE ; ಪತ್ನಿ ಇಲ್ಲದ ವೇಳೆ 17 ವಯಸ್ಸಿನ ಪುತ್ರಿಯರ ಮೇಲೆ ಅತ್ಯಾಚಾರ- ಪಾಪಿ ಅಪ್ಪ ಅರೆಸ್ಟ್!
Thursday, June 17, 2021
ಮಂಗಳೂರು; ಬುದ್ದಿವಂತರ ಜಿಲ್ಲೆ ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಹೇಯ ಕೃತ್ಯವೊಂದು ನಡೆದಿದೆ.
ಪತ್ನಿ ಮನೆಯಿಂದ ಹೊರಹೋಗುತ್ತಿದ್ದ ವೇಳೆ ತನ್ನ ಇಬ್ಬರು ಅಪ್ರಾಪ್ತ ಪುತ್ರಿಯರ ಮೇಲೆ ಅಪ್ಪನೆ ಅತ್ಯಾಚಾರವೆಸಗುತ್ತಿದ್ದ ಅಮಾನವೀಯ ಘಟನೆ ನಡೆದಿದೆ.ತನ್ನ 17 ಮತ್ತು 18 ವರ್ಷದ ಇಬ್ಬರು ಪುತ್ರಿಯರ ಮೇಲೆ ಈತ ಒಂದೂವರೆ ವರ್ಷಗಳಿಂದ ನಿರಂತರ ಅತ್ಯಾಚಾರ ವೆಸಗುತ್ತಿದ್ದ.
ಈ ಬಾಲಕಿಯರು ಇತ್ತೀಚೆಗೆ ತಾಯಿ ಜೊತೆ ಮಾವನ ಮನೆಗೆ ತೆರಳಿದ್ದ ವೇಳೆ ಘಟನೆ ಬಗ್ಗೆ ಬಾಯಿಬಿಟ್ಟಿದ್ದಾರೆ. ಆ ಬಳಿಕ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿದ ಮಹಿಳಾ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.