ಮದುವೆಯಾಗದಿದ್ದರೆ ದೇವದಾಸಿ ಮಾಡ್ತೀನಿ: ಅಕ್ಕನ ಗಂಡನಿಂದ ಕಿರುಕುಳ
Wednesday, June 16, 2021
ರಾಯಚೂರು: 'ನನ್ನನು ಮದುವೆಯಾಗದಿದ್ದರೆ ದೇವದಾಸಿಯನ್ನಾಗಿ ಮಾಡುತ್ತೇನೆ' ಎಂದು ಅಕ್ಕನ ಗಂಡ ಯುವತಿಗೆ ಬೆದರಿಕೆ ಹಾಕಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ನಡೆದಿದೆ.
ಚಿಂಚೋಡಿ ಗ್ರಾಮದ ಯುವತಿಗೆ ತನ್ನ ಅಕ್ಕನ ಗಂಡ ಶಾಂತಪ್ಪ ಎಂಬಾತ ಮದುವೆಯಾಗುವಂತೆ ಪೀಡಿಸುತ್ತಿದ್ದು, ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆತನಿಗೆ ಈಗಾಗಲೇ ಯುವತಿಯ ಅಕ್ಕನ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಈಗ ನನನ್ನು ಮದುವೆಯಾಗು ಎಂದು ಯುವತಿಗೆ ಹಿಂಸೆ ನೀಡುತ್ತಿದ್ದಾನಂತೆ.
ಈ ಬಗ್ಗೆ ಮಾಹಿತಿ ಪಡೆದ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿಗಳು ಯುವತಿಯನ್ನ ರಕ್ಷಿಸಿದ್ದಾರೆ.ಯುವತಿ ಪ್ರಸ್ತುತ ರಾಯಚೂರಿನ ಮಹಿಳಾ ಸ್ವಾಂತನ ಕೇಂದ್ರದಲ್ಲಿ ಇದ್ದಾಳೆ. ತನ್ನ ಬಾವನ ವಿರುದ್ದ ಈಕೆ ಜಾಲಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.