ಪ್ರಿಯಕರನ ಜೊತೆ ಮದುವೆ ಮಾಡಿಸುವುದಾಗಿ ನಂಬಿಸಿ ಸೊಸೆಯನ್ನೇ ಕೊಲೆಗೈದ ಮಾವ.!!


ಮುದ್ದೇಬಿಹಾಳ:
 ಜೂನ್​​​​​ 9ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಮ್ಮಲದಿನ್ನಿ ಕ್ರಾಸ್ ಬಳಿಯ ಇಣಚಗಲ್ ಸೇತುವೆ ಬಳಿ ಅಪ್ರಾಪ್ತೆಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯಾದ ಬಾಲಕಿಯನ್ನು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್​​​ ಠಾಣಾ ವ್ಯಾಪ್ತಿಯ ಬಳುಂಡಗಿ ಗ್ರಾಮದ ಆರತಿ ಮಲ್ಲಪ್ಪ ಬಿಲ್ಲಾಡ (17) ಎಂದು ಗುರುತಿಸಲಾಗಿದೆ.

ಬಾಲಕಿಯ ಸೋದರಮಾವ ಸಿದ್ರಾಮಪ್ಪ ಕಲ್ಲಪ್ಪ ಅವಟಿ (43) ಎಂಬಾತನೇ ಕೊಲೆ ಆರೋಪಿ ಎಂಬುದು ಬಯಲಾಗಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.