ಪರ ಪುರುಷನೊಂದಿಗೆ ಅಕ್ರಮ ಸಂಬಂಧ: ಪತ್ನಿಯ ಜೊತೆ ತಾಯಿಯನ್ನು ಕೊಂದ ಭೂಪ!
Tuesday, June 15, 2021
ಹಾಸನ: ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಇತ್ತು ಎಂದು ಪತ್ನಿ ಹಾಗೂ ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ
ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ.
ಮಂಜುಳಾ(28) ಮತ್ತು ಇವರ ತಾಯಿ ಭಾರತಿ(56) ಮೃತಪಟ್ಟ ದುರ್ದೈವಿಗಳು. ಮಂಜುಳಾ ಮತ್ತು ಶ್ರೀಧರ್ಗೆ ಕೆಲವು ವರ್ಷಗಳ ಹಿಂದೆ ಮದುವೆ ಆಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡನಿದ್ದರೂ ಮಂಜುಳಾಗೆ ರಂಗಾಪುರ ಗ್ರಾಮದ ಯುವಕನೊಂದಿಗೆ ಅಕ್ರಮ ಸಂಬಂಧ ಇತ್ತಂತೆ. ಸೋಮವಾರ ಸಂಜೆ ಜಮೀನು ಬಳಿ ಪ್ರಿಯಕರನೊಂದಿಗೆ ತನ್ನ ಪತ್ನಿ ಇರುವುದನ್ನ ಕಂಡ ಆಕೆಯ ಗಂಡ ಅಟ್ಟಾಡಿಸಿಕೊಂಡು ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾನೆ.
ಮಗಳ ಅಕ್ರಮ ಸಂಬಂಧಕ್ಕೆ ತಾಯಿಯ ಸಾತ್ ಕೂಡ ಇತ್ತು ಎಂದು ಅಲ್ಲಿಯೇ ಇದ್ದ ಮಂಜುಳಾರ ತಾಯಿಯನ್ನೂ ಬಡಿದು ಕೊಂದಿದ್ದಾನೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಶ್ರೀಧರ್ನನ್ನು ಬಂಧಿಸಿದ್ದಾರೆ. ಆದರೆ ಏನು ತಪ್ಪು ಮಾಡದ ಅವರ ಮಕ್ಕಳು ಅನಾಥರಾಗಿದ್ದಾರೆ.