ವಿವಾಹದ ಬಳಿಕವು ಅಕ್ರಮ ಸಂಬಂಧ- ಮಹಿಳೆಯ ಬೆತ್ತಲೆ ಮೆರವಣಿಗೆ ಮಾಡಿದ ಕಟುಕರು!
Tuesday, June 15, 2021
ಕೊಲ್ಕತ್ತಾ : ಬುಡಕಟ್ಟು ಜನಾಂಗದ ಮಹಿಳೆಯೊಬ್ಬರನ್ನು ಅಕ್ರಮ ಸಂಬಂಧ ಹೊಂದಿದ್ದ ಆರೋಪದಲ್ಲಿ ಮನೆಯಿಂದ ಹೊರಕ್ಕೆಳೆದು ಬಟ್ಟೆ ಬಿಚ್ಚಿಸಿ ಬೆತ್ತಲು ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಆರು ತಿಂಗಳ ಹಿಂದೆ ಗಂಡನಿಂದ ಬೇರ್ಪಟ್ಟಿದ್ದ ಈ ಮಹಿಳೆಗೆ ಅಕ್ರಮ ಸಂಬಂಧ ಇತ್ತು ಎಂದು ಆರೋಪಿಸಲಾಗಿದೆ. ಕಳೆದ ವಾರ ಮಹಿಳೆ ಮನೆಗೆ ಮರಳಿದಾಗ ಬುಧವಾರ ರಾತ್ರಿ ಆಕೆಯ ಮನೆಗೆ ಧಾವಿಸಿದ ಗ್ರಾಮಸ್ಥರ ಗುಂಪು ಆಕೆಯನ್ನು ಮನೆಯಿಂದ ಹೊರಕ್ಕೆಳೆದು ಬಟ್ಟೆ ಬಿಚ್ಚಿಸಿ ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಆಕೆಯನ್ನು ನಗ್ನವಾಗಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು
ಈ ಘಟನೆ ಬಳಿಕ ಮಹಿಳೆ ನಾಪತ್ತೆಯಾಗಿದ್ದು, ಯಾರೂ ಈ ಬಗ್ಗೆ ಪೊಲೀಸರಿಗೆ ದೂರು ನೀಡಿರಲಿಲ್ಲ. ಮಹಿಳೆಯನ್ನು ಬಳಿಕ ಅಸ್ಸಾಂನಲ್ಲಿರುವ ತವರು ಮನೆಯಲ್ಲಿ ಪತ್ತೆ ಮಾಡಿ ವಾಪಸ್ ಕರೆಸಲಾಗಿದೆ. ಈ ಘಟನೆಗೆ ಸಂಬಂಧಿಸಿದ 11 ಮಂದಿ ಆರೋಪಿಗಳ ಪೈಕಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.