ಖ್ಯಾತ ನಟಿ ಮೇಲೆ ಅತ್ಯಾಚಾರ,ಕೊಲೆಯತ್ನ: ನ್ಯಾಯಕ್ಕಾಗಿ ಪ್ರಧಾನಿ ಮೊರೆ
Monday, June 14, 2021
ಢಾಕಾ: ಪೋರಿ ಮೋನಿ ಎಂದೇ ಜನಪ್ರಿಯವಾಗಿರುವ ನಟಿ ಶಮ್ಸುನ್ನಹಾರ್ ಸ್ಮ್ರಿತಿ 'ನನ್ನ ಮೇಲೆ ಅತ್ಯಾಚಾರ ಹಾಗೂ ಕೊಲೆಗೆ ಯತ್ನಿಸಲಾಗಿದೆ' ಎಂದು ಪ್ರಧಾನಿ ಶೇಖ್ ಹಸೀನಾ ಅವರನ್ನು ಉದ್ದೇಶಿಸಿ ನ್ಯಾಯ ದೊರಕಿಸಿಕೊಡುವಂತೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿ ಮನವಿ ಮಾಡಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ನಾನು ಹಲವು ಮಂದಿಯಲ್ಲಿ ಸಹಾಯ ಕೇಳಿದ್ದೇನೆ. ಪೊಲೀಸ್ ಮೊರೆ ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ.ನನಗೆ ಎಲ್ಲಿ ನ್ಯಾಯ-ಸರಿಯಾದ ತೀರ್ಪು ಸಿಗುತ್ತದೆ? ಎಂದೂ ನಟಿ ಪ್ರಶ್ನಿಸಿದ್ದಾರೆ.
ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಅವರನ್ನು "ಅಮ್ಮಾ ,ನಾನೊಬ್ಬ ಹೆಣ್ಣು, ಹೀರೋಯಿನ್, ದೇಶದ ಪ್ರಜೆ ಎಲ್ಲದಕ್ಕಿಂತ ಮುಖ್ಯವಾಗಿ ನಾನು ಮನುಷ್ಯಳು. ನಾನು ಸುಮ್ಮನಿರಲು ಸಾಧ್ಯವಿಲ್ಲ. ನನ್ನ ತಾಯಿ ತೀರಿಕೊಂಡಾಗ ನನಗೆ ಸುಮಾರು ಎರಡೂವರೆ ವರ್ಷ. ನನಗೆ ನೀವು ಬೇಕು, ನಾನು ಬದುಕಬೇಕು ಅಮ್ಮಾ" ಎಂದು ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ.