
38 ಪತ್ನಿಯರ ಗಂಡ, 89 ಮಕ್ಕಳ ಅಪ್ಪ, 33 ಮೊಮ್ಮಕ್ಕಳ ತಾತ ಇನ್ನಿಲ್ಲ!
ಐಜಾಲ್ (ಮಿಜೋರಾಂ): 38 ಮಡದಿಯರು, 89 ಮಕ್ಕಳು ಮತ್ತು, 33 ಮೊಮ್ಮಕ್ಕಳ ವಾರಸ್ದಾರ ಜಿಯಾಂಘಾಕಾ ಅಕಾ ಜಿಯಾನ್ (76) ಭಾನುವಾರ ನಿಧನರಾಗಿದ್ದಾರೆ.
ಜಿಯಾನ್ ಶುಗರ್ ಮತ್ತು ಬಿಪಿಯಿಂದ ಬಳಲುತ್ತಿದ್ದರು. ಇವರು ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯದ ಸ್ಥಿತಿ ಮತ್ತಷ್ಟು ಹದಗೆಟ್ಟ ಕಾರಣ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಅವರು ಮೃತ ಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇವರ ನಿಧನಕ್ಕೆ ಸಿಎಂ ಝೊರಮ್ಥಂಗಾ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಲಾಲ್ ತನ್ಹಾವ್ಲಾ ಸೇರಿ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.