-->
Different Love story-ಯಾರಿಗೂ ಸಣ್ಣ ಸುಳಿವೂ ನೀಡದಂತೆ ಬರೋಬ್ಬರಿ 10 ವರ್ಷಗಳ ಕಾಲ ತನ್ನ ಕೋಣೆಯಲ್ಲಿಯೇ ಬಚ್ಚಿಟ್ಟ ಪ್ರಿಯಕರ!

Different Love story-ಯಾರಿಗೂ ಸಣ್ಣ ಸುಳಿವೂ ನೀಡದಂತೆ ಬರೋಬ್ಬರಿ 10 ವರ್ಷಗಳ ಕಾಲ ತನ್ನ ಕೋಣೆಯಲ್ಲಿಯೇ ಬಚ್ಚಿಟ್ಟ ಪ್ರಿಯಕರ!


ಪಾಲಕ್ಕಾಡ್ (ಕೇರಳ): ಯುವಕನೋರ್ವನು ಕುಟುಂಬಸ್ಥರು, ನೆರೆಹೊರೆಯವರಿಗೆ ಯಾವುದೇ ಸುಳಿವೂ ದೊರಕದಂತೆ ಬರೋಬ್ಬರಿ 10 ವರ್ಷಗಳ ಕಾಲ ತನ್ನ ಪ್ರೇಯಸಿಯನ್ನು ಮನೆಯಲ್ಲೇ ಅಡಗಿಸಿಟ್ಟ ವಿಚಿತ್ರ ಘಟನೆಯೊಂದು  ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಅರಿಯೂರ್ ಬಳಿಯ ಕರೈಕ್ಕಟ್ಟುಪರಂಬು ಎಂಬ ಪುಟ್ಟ ಗ್ರಾಮದಲ್ಲಿ ನಡೆದಿದೆ. ಇದು ವಿಚಿತ್ರವೆನಿಸಿದರೂ, ಸತ್ಯ ಘಟನೆ.

ಕರೈಕ್ಕಟ್ಟುಪರಂಬು‌ ಬಹಳ ಹಿಂದುಳಿದ ಪ್ರದೇಶವಾಗಿದ್ದು, ಸಣ್ಣಸಣ್ಣ ಮನೆಗಳಿದ್ದು, ಅಕ್ಕ-ಪಕ್ಕದ ಮನೆಗಳ ನಡುವೆ ಹೆಚ್ಚು ಅಂತರವಿಲ್ಲ. ಯುವಕ ಪ್ರೇಯಸಿಯನ್ನು ಅದು ಯಾವ ರೀತಿಯಲ್ಲಿ ಹಾಗೆಯೇ ಯಾಕಾಗಿ ತನ್ನ ಮನೆಯಲ್ಲಿಯೇ ಬಚ್ಚಿಟ್ಟಿದ್ದಾನೆ ಎಂಬುದರ ಹಿಂದೆ ಅಂತರ್ಜಾತಿಯ ಪ್ರೇಮಕತೆಯಿದೆ. 

ಕರೈಕ್ಕಟ್ಟುಪರಂಬು ಎಂಬ ಅದೇ ಗ್ರಾಮದ ತನ್ನ ಮನೆಯಿಂದ ಕೇವಲ 100 ಮೀ. ದೂರದಲ್ಲಿರುವ ಮನೆಯ 19 ವರ್ಷದ ಯುವತಿಯನ್ನು ಈ ಯುವಕ ಪ್ರೀತಿಸುತ್ತಿರುತ್ತಾನೆ. ಇಬ್ಬರೂ ಬೇರೆ ಬೇರೆ ಜಾತಿಯವರಾಗಿದ್ದರಿಂದ ಕುಟುಂಬಸ್ಥರಿಗೆ ಹೇಳುವ ಧೈರ್ಯ ಅವರಿಗೆ ಇರಲಿಲ್ಲ. ದಿಕ್ಕು ತೋಚದಂತಾದ ಯುವಕ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ಸಣ್ಣ ಕೋಣೆಯೊಂದರಲ್ಲೇ ಅಡಗಿಸಿಟ್ಟುಕೊಂಡಿದ್ದಾನೆ. ತನ್ನ ಕುಟುಂಬಸ್ಥರಿಗೆ ವಿಷಯ ತಿಳಿಸಿ, ಕೆಲವು ದಿನಗಳಲ್ಲೇ ಮದುವೆಯಾಗಬೇಕು ಎಂದ ಯೋಚಿಸಿದ್ದ. ಆದರೆ ಕೈಯಲ್ಲಿ ಹಣವಿಲ್ಲದ ಕಾರಣ ಹಾಗೂ ಹೊರಗಡೆ ವಿಚಾರ ಬೆಳಕಿಗೆ ಬಂದರೆ ತಾನು ಎದುರಿಸಬೇಕಾದ ತೊಂದರೆಗಳನ್ನು ಊಹಿಸಿಕೊಂಡು ಭಯಭೀತನಾಗಿ, ಎಲ್ಲಾ ವಿಚಾರವನ್ನು ಬರೋಬ್ಬರಿ 10 ವರ್ಷಗಳ ಕಾಲ ರಹಸ್ಯವಾಗಿಯೇ ಇಟ್ಟಿದ್ದನು. 

ಯುವತಿ ನಾಪತ್ತೆಯಾದ ತಕ್ಷಣ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡುತ್ತಾರೆ. ಪೊಲೀಸರು ಸಾಕಷ್ಟು ತನಿಖೆ ನಡೆಸುತ್ತಾರೆ. ಆದರೆ ಏನೂ ಪ್ರಯೋಜನವಾಗಿರಲಿಲ್ಲ. ಕೆಲ ವರ್ಷಗಳ ಕಾಲ ಮಗಳಿಗಾಗಿ ಹುಡುಕಿದ್ದ ಪೋಷಕರು ತಮ್ಮ ಪ್ರಯತ್ನ ನಿಲ್ಲಿಸುತ್ತಾರೆ. ಪೊಲೀಸರು ತನಿಖೆಯನ್ನು ಅಂತ್ಯಗೊಳಿಸುತ್ತಾರೆ. ಆದರೆ 10 ವರ್ಷಗಳ ಬಳಿಕ ಈ ನಾಪತ್ತೆ ಪ್ರಕರಣಕ್ಕೆ ಸಿನಿಮೀಯ ರೀತಿಯ ಕ್ಲೈಮ್ಯಾಕ್ಸ್ ದೊರಕುತ್ತದೆ.

ಯುವಕನು ತನ್ನ ಕೋಣೆಯಲ್ಲಿಯೇ  ಯುವತಿಯನ್ನು ಬಚ್ಚಿಟ್ಟ ಬಳಿಕ ವಿಚಿತ್ರವಾಗಿ ವರ್ತಿಸಲು ತೊಡಗುತ್ತಾನೆ. ಕುಟುಂಬಸ್ಥರನ್ನು ಅಂದಿನಿಂದ ತನ್ನ ಕೋಣೆಗೆ ಪ್ರವೇಶಿಸದಂತೆ ಬೆದರಿಸುವ ವಿಚ ತಂತ್ರ ಹೂಡುತ್ತಾನೆ. ಅಲ್ಲದೆ ತಾನೇನೆ ಮಾಡಿದರೂ ಮನೆಯವರು ನನ್ನನ್ನು ಪ್ರಶ್ನಿಸಬಾರದೆಂದು ಮಾನಸಿಕ ಅಸ್ವಸ್ಥನಂತೆ ವರ್ತಿಸಲು ತೊಡಗುತ್ತಾನೆ. ಇದರಿಂದ ಕುಟುಂಬಸ್ಥರೂ ಹೆದರಿ ಅವನ ಕೋಣೆಯೊಳಗೆ ಯಾರೂ ಬರುತ್ತಿರಲಿಲ್ಲ. ಕೆಲಸಕ್ಕೆಂದು ಮಾತ್ರ ಹೊರಗೆ ಹೋಗೋದು, ಉಳಿದ ಸಮಯ ಕೊಣೆಯಲ್ಲಿಯೇ ಪ್ರೇಯಸಿಯೊಂದಿಗೆ ಕಳೆಯತೊಡಗುತ್ತಾನೆ. ತನ್ನ ಸ್ನೇಹಿತರೊಂದಿಗೂ ಬೆರೆಯುವುದನ್ನು ನಿಲ್ಲಿಸಿದ್ದನು. 

ರಾತ್ರಿ ಮನೆಯಲ್ಲಿ ಎಲ್ಲರೂ ನಿದ್ರೆಗೆ ಜಾರಿದ ಮೇಲೆ ಕೋಣೆಯ ಕಿಟಕಿ ಮೂಲಕ ಯುವತಿಯನ್ನು ಸ್ನಾನಗೃಹ, ಶೌಚಾಲಯಕ್ಕೆ ಕರೆದೊಯ್ಯುತ್ತಿದ್ದನು. ತನಗೆಂದು ಊಟ ತೆಗೆದುಕೊಂಡು ಕೋಣೆಯೊಳಗೆ ಹೋಗಿ ಆಕೆಗೆ ನೀಡುತ್ತಿದ್ದನು. ಆದರೆ ಪ್ರಿಯತಮನ ಮನೆಗೆ ಯಾರು ಬಂದರು ಎಂಬುದನ್ನು ಯುವತಿ ಕಿಟಕಿ ಮೂಲಕ‌ ಗಮನಿಸುತ್ತಿದ್ದಳು. ಅಲ್ಲದೆ ಒಂದೆರಡು ಸಲ ತನ್ನ ತಂದೆ ಮತ್ತು ತಾಯಿಯನ್ನು ನೋಡಿದ್ದಳು ಎಂದು ತಿಳಿದು ಬಂದಿದೆ. 

ಆದರೆ ಕಳೆದ ಮೂರು ತಿಂಗಳ ಹಿಂದೆ ಯುವತಿಯನ್ನು ಕರೆದುಕೊಂಡು ಆತ ಪರಾರಿಯಾಗಿ ವಿವಾಹವಾಗಿ ವಿಥಾನಸ್ಸೆರಿ ಎಂಬ ಗ್ರಾಮದಲ್ಲಿ ವಾಸ ಮಾಡಲು ಶುರು ಮಾಡಿದ್ದನು. ಯುವಕ ಕಾಣೆಯಾಗಿರುವ ಬಗ್ಗೆ  ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಒಂದು ದಿನ ಯುವಕನನ್ನು ಆತನ ಸಹೋದರ ನೋಡಿದ್ದು, ಆ ಬಳಿಕ ಪೊಲೀಸರು ವಿಚಾರಣೆಗೆ ಕರೆಯಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಪ್ರೇಮಿಗಳಿಬ್ಬರೂ ಸತ್ಯ ಬಾಯ್ಬಿಟ್ಟಿದ್ದು, 10 ವರ್ಷಗಳ ಪ್ರೇಯಸಿಯನ್ನು ತನ್ನ ಕೋಣಿಯಲ್ಲಿಯೇ ಬಚ್ಚಿಟ್ಟ ಕಥೆಯನ್ನು ಕೇಳಿ ಕುಟುಂಬಸ್ಥರು, ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.

Ads on article

Advertise in articles 1

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Support Us- Pay Rs 101

  

advertising articles 2

Advertise under the article

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Support Us-Pay Rs 101