ಮೊಬೈಲ್ ವ್ಯವಹಾರ 3 ದಿನದ ಕಂದಮ್ಮನ ಮಾರಾಟ : ಏನಿದರ ಅಸಲಿ ಕತೆ?
Friday, June 11, 2021
ಮೈಸೂರು: ಮಹಿಳೆಯೊಬ್ಬಳು ಮೊಬೈಲ್ನಲ್ಲೇ ವ್ಯವಹರಿಸಿ ತನ್ನ ಮೂರು ದಿನದ ಮಗುವನ್ನು ಮಾರಾಟ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ರೋಜಾ ಎಂಬಾಕೆಗೆ 7 ತಿಂಗಳ ಹಿಂದೆ ಗಂಡು ಮಗು ಆಗಿತ್ತು. ಆದರೆ ಆಕೆ ನನಗೆ ಹೆಣ್ಣು ಮಗು ಬೇಕಿತ್ತು, ಗಂಡು ಮಗು ಬೇಡ ಎಂದು ಎಚ್.ಡಿ.ಕೋಟೆ ತಾಲೂಕಿನ ದಂಪತಿಗೆ ಮಾರಾಟ ಮಾಡಿದ್ದಳು. ಅಂಬರೀಶ್ ಮತ್ತು ಮಧುಮಾಲತಿ ದಂಪತಿಯು ರೋಜಾಗೆ 1.5 ಲಕ್ಷ ರೂ. ಕೊಟ್ಟು ಮಗುವನ್ನ ಖರೀದಿಸಿದ್ದರು.
ಈ ದಂಪತಿ ತಲೆಕೂದಲು ಬೆಳೆಯುವ ತೈಲ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ತೈಲ ಮಾರಾಟದ ವೇಳೆ ರೋಜಾಳ ಪರಿಚಯವಾಗಿತ್ತು. ಹಾಗಾಗಿ ಇವರ ಬಳಿ ರೋಜಾ ಮೊಬೈಲ್ ಕರೆ ಮೂಲಕವೇ ಚೌಕಾಸಿ ನಡೆಸಿ ಅಂತಿಮವಾಗಿ 1.5 ಲಕ್ಷ ರೂ.ಗೆ ಮಗು ಮಾರಿದ್ದಳು. ಅಂದಿನಿಂದ ಆ ಮಗು ಟೈಗರ್ ಬ್ಲಾಕ್ನಲ್ಲಿ ಅಂಬರೀಷ್ ಮತ್ತು ಮಧುಮಾಲಾತಿ ಆಶ್ರಯದಲ್ಲೇ ಬೆಳೆಯುತ್ತಿದೆ. ಇದೀಗ ಅಂದರೆ 7 ತಿಂಗಳ ಬಳಿಕ ಬೆಂಗಳೂರಿಂದ ಟೈಗರ್ ಬ್ಲಾಕ್ಗೆ ಬಂದ ರೋಜಾ, ಮಗು ಕೊಡುವಂತೆ ರಂಪಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಈ ಮಗು ಅಪಹರಣವಾಗಿತ್ತೇ? ಎಂಬ ಅನುಮಾನವೂ ಕಾಡುತ್ತಿದೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.