'ಯಾರಿಗೆ ಬಂತು ಎಲ್ಲಿಗೆ ಬಂತು ಸ್ವಾತಂತ್ರ್ಯ 'ದ ಕವಿ ಕೋವಿಡ್ ಗೆ ಬಲಿ
Friday, June 11, 2021
ಬೆಂಗಳೂರು: 'ಯಾರಿಗೆ ಬಂತು ಎಲ್ಲಿಗೆ ಬಂತು ಸ್ವಾತಂತ್ರ್ಯ' ಮುಂತಾದ ಆಕ್ರೋಶಭರಿತ ಕೃತಿಗಳನ್ನು ಬರೆದು ಬಂಡಾಯ ಸಾಹಿತಿಯೆಂದೇ ಗುರುತಿಸಿದ್ದ ಡಾ.ಸಿದ್ದಲಿಂಗಯ್ಯ ಇಂದು ಸಂಜೆ 4.45ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಿದ್ದಲಿಂಗಯ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಸಿದ್ಧಲಿಂಗಯ್ಯನವರು ಮಾಗಡಿ ತಾಲೂಕಿನ ಮಂಚನಬೆಲೆ’ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
ತಮ್ಮ ಬಂಡಾಯ ಸಾಹಿತ್ಯಗಳಿಂದಲೇ ಗುರುತಿಸಿಕೊಂಡಿರುವ ಅವರು 'ಯಾರಿಗೆ ಬಂತು ಎಲ್ಲಿಗೆ ಬಂತು ಸ್ವಾತಂತ್ರ್ಯ', 'ಇಕ್ರಲ್ಲಾ ಒದಿರ್ಲಾ' 'ಹೊಲೆಮಾದಿಗರ ಹಾಡು' ಮುಂತಾದ ಕವನಗಳನ್ನು ರಚಿಸಿದ್ದರು. ಅಲ್ಲದೆ ಗ್ರಾಮದೇವತೆ ಎಂಬ ಸಂಶೋಧನಾ ಗ್ರಂಥವನ್ನು ರಚಿಸಿದ್ದ ಅವರು ಏಕಲವ್ಯ ಎಂಬ ನಾಟಕ ಹಾಗೂ ಊರುಕೇರಿ ಎಂಬ ಆತ್ಮಕಥೆಯನ್ನು ಬರೆದಿದ್ದರು.
ಇಂದೇ ಡಾ.ಸಿದ್ಧಲಿಂಗಯ್ಯ ಅವರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.