
Mangalore:ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಜೋಡಿ- ಇವರು ಒಳಗೆ ಹೋಗಿದ್ದು ಹೇಗೆ?
ಮಂಗಳೂರು: ನಗರದ ಕೆಎಸ್ ರಾವ್ ರಸ್ತೆಯಲ್ಲಿರುವ ಲಾಡ್ಜ್ ವೊಂದರಲ್ಲಿ ಒಂದರಲ್ಲಿ ಅಪ್ರಾಪ್ತೆ ಹಾಗೂ ಯುವಕನೋರ್ವನು ನಕಲಿ ಪಾಸ್ ಬಳಸಿ ರೂಂ ಮಾಡಿ ಸಿಕ್ಕಿಬಿದ್ದಿರುವ ಘಟನೆ ನಿನ್ನೆ ನಡೆದಿದೆ.
ಅಪ್ರಾಪ್ತ ವಿದ್ಯಾರ್ಥಿನಿ ತರಿಕೇರಿ ಮೂಲದವಳಾಗಿದ್ದು, ನಗರದ ಕಾಲೇಜೊಂದರಲ್ಲಿ ಓದುತ್ತಿದ್ದಾಳೆ. ಯುವಕ ಕುದ್ರೋಳಿ ನಿವಾಸಿಯಾಗಿದ್ದಾನೆ. ಇವರೀರ್ವರು ಲಾಡ್ಜ್ ವೊಂದರಲ್ಲಿ ಪತ್ತೆಯಾಗಿದ್ದರು.
ದ.ಕ.ಜಿಲ್ಲೆಯಲ್ಲಿ ಎರಡು ದಿನಗಳ ವಾರಾಂತ್ಯ ಕರ್ಫ್ಯೂವಿದ್ದರೂ ಅಪ್ರಾಪ್ತ ವಿದ್ಯಾರ್ಥಿನಿ ಹಾಗೂ ಯುವಕ ಲಾಡ್ಜ್ ನಲ್ಲಿ ರೂಮ್ ಮಾಡಿರುವ ಬಗ್ಗೆ ಬಂದರು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಪೊಲೀಸರು ಹೊಟೇಲ್ ಗಳಿಗೆ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಪ್ರತ್ಯೇಕ ರೂಮ್ ನಲ್ಲಿದ್ದರೆಂದು ತಿಳಿದು ಬಂದಿದೆ.
ಇವರಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.