ಹಿಮಾಚಲ ಪ್ರದೇಶದಲ್ಲಿ ಕಂಡು ಬಂದಿದೆ ವಿಶ್ವದ ಅತೀ ಉದ್ದದ ವಿಷಪೂರಿತ ನಾಗರಹಾವು ಪತ್ತೆ
Saturday, June 5, 2021
ಶಿಮ್ಲಾ( ಹಿಮಾಚಲ ಪ್ರದೇಶ): ವಿಶ್ವದಲ್ಲೇ ಅತೀ ಉದ್ದದ್ದೆಂದು ಹೇಳಲಾದ ವಿಷಪೂರಿತ ನಾಗರಹಾವೊಂದು ಹಿಮಾಚಲದ ಸಿರ್ಮೌರ್ ಜಿಲ್ಲೆಯ ಶಿವಾಲಿಕ್ ಬೆಟ್ಟದಲ್ಲಿ ಕಾಣಿಸಿಕೊಂಡಿದೆ.
ಹಿಮಾಚಲ ಪ್ರದೇಶ ರಾಜ್ಯದ ಸಿರ್ಮೌರ್ ಜಿಲ್ಲೆಯ ಕೋಲಾರ ಪಂಚಾಯತ್ ನ ಫಾಂಡಿ ಗ್ರಾಮದ ಶಿವಾಲಿಕ್ ಬೆಟ್ಟದಲ್ಲಿ ಈ ಅಪರೂಪದ ಹಾವು ಕಂಡು ಬಂದಿದೆ. ವನ್ಯಜೀವಿ ಇಲಾಖೆಯ ಪ್ರಕಾರ, ಇಷ್ಟು ಉದ್ದದ ನಾಗರ ಹಾವು ಇದೆ ಮೊದಲ ಬಾರಿಗೆ ರಾಜ್ಯದಲ್ಲಿ ಕಾಣಿಸಿಕೊಂಡಿದೆ.
ಈ ನಾಗರಹಾವು ಸುಮಾರು 15 ಅಡಿಗೂ ಹೆಚ್ಚು ಉದ್ದವಾಗಿದೆ ಎನ್ನಲಾಗಿದೆ. ಪರ್ವತ ಏರುತ್ತಿರುವ ಈ ನಾಗರಹಾವಿನ ವೀಡಿಯೊವನ್ನು ಒಂದು ವಾರದ ಹಿಂದೆ ಸೆರೆ ಹಿಡಿಯಲಾಗಿದೆ ಎಂದು ಹೇಳಲಾಗಿದೆ.