ಬೇಡ ಯಡಿಯೂರಪ್ಪ ಅಂತ ಹೈಕಮಾಂಡ್ ಹೇಳಿದ ತಕ್ಷಣ ರಾಜೀನಾಮೆ- ಮೊದಲ ಬಾರಿ ರಾಜೀನಾಮೆ ಬಗ್ಗೆ ಮಾತಾಡಿದ ಬಿ ಎಸ್ ವೈ (Video)
Sunday, June 6, 2021
ಬೆಂಗಳೂರು; ಬೇಡ ಯಡಿಯೂರಪ್ಪ ನವರೆ ಎಂದು ಹೈಕಮಾಂಡ್ ಹೇಳಿದ ತಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಮೊದಲ ಬಾರಿಗೆ ರಾಜೀನಾಮೆ ವಿಚಾರ ಪ್ರಸ್ತಾಪ ಮಾಡಿರುವ ಯಡಿಯೂರಪ್ಪ ಅವರ ಹೇಳಿಕೆ ಚರ್ಚೆಗಳಿಗೆ ಕಾರಣವಾಗಿದೆ.
ಬಿಜೆಪಿ ವರಿಷ್ಠರು ವಿಶ್ವಾಸವಿಟ್ಟು ನನಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ. ಅವರು ಬೇಡ ಎಂದು ಸೂಚಿಸಿದ ತಕ್ಷಣ ರಾಜೀನಾಮೆ .ಎಲ್ಲಿಯವರೆಗೆ ಅಧಿಕಾರದಲ್ಲಿ ಇರುವಂತೆ ಹೇಳುತ್ತಾರೋ ಅಲ್ಲಿಯವರೆಗೆ ಮುಂದುವರಿಯುತ್ತೇನೆ. ಆದರೆ ಹೈಕಮಾಂಡ್ ಗೆ ನನ್ನ ಮೇಲೆ ವಿಶ್ವಾಸ ಇದೆ" ಎಂದಿದ್ದಾರೆ.
ನಾಯಕತ್ವ ಬದಲಾವಣೆ ಸೇರಿದಂತೆ ಯಾವುದೇ ಟೀಕೆಗಳ ಬಗ್ಗೆ ಯಾವುದರ ಬಗ್ಗೆಯೂ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲಿಯವರೆಗೆ ದೆಹಲಿಯ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಡುತ್ತದೆಯೋ ಅಲ್ಲಿಯವರೆಗೂ ನಾನು ಸಿಎಂ ಆಗಿ ಮುಂದುವರೆಯುತ್ತೇನೆ.