
ಟ್ರ್ಯಾಕ್ಟರ್ ಡ್ರೈವ್ ಮಾಡಿಕೊಂಡು ಬಂದು ಕಲ್ಯಾಣಮಂಟಪಕ್ಕೆ ಎಂಟ್ರಿ ಕೊಟ್ಟ ವಧು...
Wednesday, June 30, 2021
ಪುಣೆ(ಮಹಾರಾಷ್ಟ್ರ): ವಧು ತಾನೇ ಟ್ರ್ಯಾಕ್ಟರ್ ಡ್ರೈವ್ ಮಾಡಿಕೊಂಡು ಬಂದು ಕಲ್ಯಾಣಮಂಟಪಕ್ಕೆ ಬಂದಿದ್ದಾಳೆ. ಮಹಾರಾಷ್ಟ್ರದ ಪುಣೆಯ ದೌಂಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಸುಮಾರು ಎರಡು ಕಿಲೋ ಮೀಟರ್ ದೂರದಿಂದ ಟ್ರ್ಯಾಕ್ಟರ್ ಡ್ರೈವ್ ಮಾಡಿಕೊಂಡು ಬಂದ ವಧು ಪೂಜಾ ರಾಜಾರಾಮ್ ಗಾಯ್ಕವಾಡ್ ಕಲ್ಯಾಣ ಮಂಟಪ ಏರಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೂಜಾ, ನಮ್ಮ ತಂದೆ ಒಬ್ಬ ರೈತ.ಮದುವೆ ಮಾಡಿಕೊಳ್ಳುವ ವೇಳೆ ಟ್ರ್ಯಾಕ್ಟರ್ ಡ್ರೈವ್ ಮಾಡಿಕೊಂಡು ಹೋಗಬೇಕು ಎಂಬ ಆಸೆ ಇತ್ತು. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.
ಯುವತಿಯ ಈ ನಿರ್ಧಾರ ಸದ್ಯ ಗ್ರಾಮದಲ್ಲಿ ಹೆಚ್ಚು ಚರ್ಚೆಗೊಳಗಾಗಿದ್ದು, ಕೆಲವರು ಮೆಚ್ಚುಗೆ ವ್ಯಕ್ತಪಡಿದ್ದಾರೆ.