-->
Mangalore:ಹೊಟೇಲ್ ನಲ್ಲಿ ಕೇಳಿ ಬಂತು ಸೆಕ್ಸ್ ವಾಯ್ಸ್: ಗ್ರಾಹಕನಿಗೆ ಬಿತ್ತು ಗೂಸ

Mangalore:ಹೊಟೇಲ್ ನಲ್ಲಿ ಕೇಳಿ ಬಂತು ಸೆಕ್ಸ್ ವಾಯ್ಸ್: ಗ್ರಾಹಕನಿಗೆ ಬಿತ್ತು ಗೂಸ

ಮಂಗಳೂರು: ಹೊಟೇಲೊಂದರಲ್ಲಿ ಗ್ರಾಹಕನೋರ್ವ ಯೂಟ್ಯೂಬ್ ಮೂಲಕ ವೀಡಿಯೋ ನೋಡುತ್ತಿರುವಾಗ ಅದರಲ್ಲಿನ ಸೆಕ್ಸ್ ವಾಯ್ಸ್ ವೊಂದು ಹೊರಗಡೆ ಜೋರಾಗಿ ಕೇಳಿರುವ ಪರಿಣಾಮ ಕೆರಳಿದ ಹೊಟೇಲ್ ನೌಕರ ಗ್ರಾಹಕನಿಗೆ ಹಲ್ಲೆ ನಡೆಸಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೂನ್ 28ರಂದು ಸಂಜೆ ಸುಮಾರು 7.30 ಸುಮಾರಿಗೆ ಮುನೀರ್ ಎಂಬವರು ಶೊರ್ಮವಾಲಾ ಹೋಟೆಲ್‌ಗೆ ಆರ್ಡರ್ ಮಾಡಲು ಬಂದಿದ್ದರು. ಈ ಸಂದರ್ಭ ಅಲ್ಲಿನ ಟಿ.ಎಸ್‌.ಕೆಫೆಯ ವೈಫೈ ಮುನೀರ್ ಮೊಬೈಲ್‌ಗೆ ಕನೆಕ್ಟ್ ಆಗಿದೆ. ಇದರಿಂದ ಮುನೀರ್ ಅವರು ಮೊಬೈಲ್ ನಲ್ಲಿ ಯುಟ್ಯೂಬ್‌ಗೆ ಹೋಗಿ ವೀಡಿಯೋ ನೋಡುತ್ತಿದ್ದರು. ಈ ಸಂದರ್ಭ ಸೆಕ್ಸ್ ವಾಯ್ಸ್ ಕೇಳಿಸಿದೆ. ಅದು ವೈಫೈ ಮೂಲಕ ಟಿ.ಎಸ್.ಕೆಫೆಯ ಟಿವಿಗೆ ಕೆನೆಕ್ಟ್ ಆಗಿದ್ದರಿಂದ ಈ ಶಬ್ದ ಅಲ್ಲಿಯೂ ಕೇಳಿಸಿಕೊಂಡಿದೆ. ಪರಿಣಾಮ ಕೆಫೆ ನೌಕರ ಸಿನಾನ್ ಎಂಬಾತ ಮುನೀರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮುನೀರ್ ಅವರು ಕ್ಷಮೆಯಾಚಿಸಿದರೂ ಬಿಡದೆ ಕೈಗಳಿಂದ ಮತ್ತು ಪ್ಲಾಸ್ಟಿಕ್ ಕುರ್ಚಿಯಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಹಲ್ಲೆಯಿಂದ ಮುನೀರ್ ತುಟಿಗೆ, ಎದೆಯ ಭಾಗಕ್ಕೆ ಗಾಯಗಳಾಗಿದ್ದು, ಈ ಬಗ್ಗೆ ಅವರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article