
ವರದಕ್ಷಿಣೆ ಕಿರುಕುಳ - 6 ತಿಂಗಳ ಹಿಂದೆಯಷ್ಟೇ ಮದುವೆಯಾದವಳು ನೇಣಿಗೆ ಶರಣು...
ದಾವಣಗೆರೆ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆರು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದಾವಣಗೆರೆ ತಾಲೂಕಿನ ಹನುಮನಹಳ್ಳಿ ಗ್ರಾಮದ ಜಯಪ್ರಕಾಶ ಅವರ ಪತ್ನಿ ಎಸ್.ಎಂ. ರೂಪಾ (25) ಮೃತ ದುರ್ದೈವಿ.ಇವರಿಬ್ಬರ ಮದುವೆ ತುಂಬಾ ಅದ್ದೂರಿಯಾಗಿ ಮಾಡಲಾಗಿತ್ತು ಹಾಗಿಯೇ ಮದುವೆಯ ವೇಳೆ ಒಂದೂವರೆ ಲಕ್ಷ ರೂಪಾಯಿ ನಗದು, 9 ತೊಲ ಚಿನ್ನಾಭರಣವನ್ನೂ ನೀಡಲಾಗಿತ್ತು. ಆದರೂ ವರದಕ್ಷಿಣೆ ತರುವಂತೆ ಗಂಡನ ಮನೆಯಲ್ಲಿ ನಿತ್ಯ ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡಲಾಗುತ್ತಿತ್ತು. ಈ ಕಾರಣಕ್ಕಾಗಿ ರೂಪಾ ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಮೃತಳ ಪಾಲಕರು ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.