6 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯನ್ನು ಸುಟ್ಟುಹಾಕಿದವ ಕೊಟ್ಟಿದ್ದು ಮಾತ್ರ ವಿಚಿತ್ರ ಕಾರಣ...!!
Monday, June 28, 2021
ಬ್ರಿಟನ್: ಬ್ರಿಟನ್ ವ್ಯಕ್ತಿಯೊಬ್ಬ ತನ್ನ ಆರು ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯನ್ನು ಸುಟ್ಟು ಬೂದಿ ಮಾಡಿದ್ದಾನೆ.
ಜಾನ್ ಮ್ಯಾಕ್‌ಕೊರ‍್ರಿ(75) ತನ್ನ ಹರಾಮಿ ಬಂಗಲೆಯನ್ನು ಸುಟ್ಟು ಹಾಕಿದ್ದಾನೆ. ಆತ ಹೀಗೆ ಮಾಡಲು ಆತನ ಪತ್ನಿಯೇ ಕಾರಣವಂತೆ. ದಂಪತಿಗಳ ನಡುವೆ ಏನು ಜಗಳ ಉಂಟಾಗಿ ಪತ್ನಿ ಮನೆ ಬಿಟ್ಟು ಹೋಗಿದ್ದು ಆ ಕಾರಣಕ್ಕಾಗಿಯೇ ಬಂಗಲೆಯನ್ನೇ ಸುಟ್ಟು ಹಾಕಿದ್ದಾನೆ. ಆಕೆ ಬಿಟ್ಟು ಹೋದ ಮೇಲೆ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ, ಈ ಬಂಗಲೆಯಲ್ಲಿ ಅವಳಿಗೂ ಪಾಲು ಕೊಡಬೇಕಾಗುತ್ತದೆ ಎಂದು ಸುಟ್ಟು ಭಸ್ಮಮಾಡಿದ್ದಾನೆ.
ಪೊಲೀಸರ ವಿಚಾರಣೆ ವೇಳೆ ಸತ್ಯವನ್ನು ಬಿಚ್ಚಿಟ್ಟಿದ್ದಾನೆ.ಕುಡಿದ ಅಮಲಿನಲ್ಲಿ ಹೀಗೆ ಮಾಡಿಬಿಟ್ಟೆ. ನಾನು ಏನು ಮಾಡುತ್ತಿದ್ದೇನೆಂದು ನನಗೆ ತಿಳಿಯಲಿಲ್ಲ. ನನ್ನ ಪತ್ನಿ ಮನೆಬಿಟ್ಟು ಹೋದ ಮಲೆ ಆಕೆ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ಪಾಲು ಕೊಡಬೇಕಾಗುತ್ತದೆ. ನಾನು ಯಾವುದೇ ಕಾರಣಕ್ಕೂ ಆಕೆಗೆ ಪಾಲು ಕೊಡುವುದಿಲ್ಲ ಎಂದಿದ್ದಾನೆ ಜಾನ್. ಆದರೆ ಪತ್ನಿ ಹೇಳಿದ್ದೇನೆಂದರೆ ನಾನು ಅವನನ್ನು ಬಿಟ್ಟುಹೋದ ಮೇಲೆ ಖುಷಿಯಾಗಿದ್ದೇನೆಂದು ಸಿಟ್ಟಿನಿಂದ ಆತ ಹಾಗೆ ಮಾಡಿದ್ದಾನೆ. ನಾನೇನೂ ವಿಚ್ಛೇದನ ಕೇಳುತ್ತಿರಲಿಲ್ಲ ಎಂದಿದ್ದಾಳೆ. ಒಟ್ಟಿನಲ್ಲಿ ಗಂಡ-ಹೆಂಡತಿ ಜಗಳ ಬಂಗಲೆ ಭಸ್ಮವಾಯಿತು.