-->

ಮಾಜಿ ಬಾಯ್ ಫ್ರೆಂಡ್  ಮದುವೆಯಾಗಬೇಕಿದ್ದ ಹುಡುಗಿಯ ಅಶ್ಲೀಲ ಫೋಟೋಗಳು ಲೀಕ್....

ಮಾಜಿ ಬಾಯ್ ಫ್ರೆಂಡ್ ಮದುವೆಯಾಗಬೇಕಿದ್ದ ಹುಡುಗಿಯ ಅಶ್ಲೀಲ ಫೋಟೋಗಳು ಲೀಕ್....

 
ಅಹಮದಾಬಾದ್: ಮಾಜಿ ಪ್ರಿಯಕರ, ತನ್ನನ್ನು ಬಿಟ್ಟ ಮೇಲೆ ಬೇರೊಬ್ಬ ಹುಡುಗಿಯನ್ನು ಮದುವೆಯಾಗಲು ಸಿದ್ಧನಾಗಿದ್ದಾನೆ ಎನ್ನುವ ಸಿಟ್ಟಿನಿಂದ, ಆತ ಮದುವೆಯಾಗಬೇಕಿದ್ದ ಹುಡುಗಿಯ ಅಶ್ಲೀಲ ಫೋಟೋಗಳನ್ನು ಆತನ ಮಾಜಿ ಲವರ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ. 

ಇತ್ತೀಚಿಗೆ ಯುವತಿಯೊಬ್ಬಳು ನನ್ನ ಇನ್ಸ್ಟಾಗ್ರಾಮ್ ಖಾತೆ  ಹ್ಯಾಕ್ ಆಗಿದೆ. ಅದರಲ್ಲಿ ನನ್ನ ಅಶ್ಲೀಲ ಫೋಟೋಸ್ಗಳು ಹರಿದಾಡುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಈ ಬಗ್ಗೆ ತನಿಖೆ ಮಾಡಿದ ಪೊಲೀಸರಿಗೆ ಆಕೆಯ ಇನ್ಸ್ಟಾಗ್ರಾಮ್  ಹ್ಯಾಕ್ ಮಾಡಿರುವುದು ಒಬ್ಬ ಹುಡುಗಿ ಯ ಎಂದು ತಿಳಿದುಬಂದಿದೆ.

ಯುವಕನ ಮಾಜಿ ಪ್ರಿಯತಮೆಯೇ ಈ ಕೆಲಸ ಮಾಡಿದ್ದು ಬೆಳಕಿಗೆ ಬಂದಿದೆ. ಆತನ ಇನ್​ಸ್ಟಾಗ್ರಾಂ ಖಾತೆಯ ಯೂಸರ್ ನೇಮ್ ಹಾಗೂ ಪಾಸ್​ವರ್ಡ್ ಆ ಯುವತಿಯ ಬಳಿ ಇತ್ತಂತೆ. ಅದನ್ನು ಬಳಸಿಕೊಂಡು ಅವನ ಖಾತೆಗೆ ಲಾಗ್​ಇನ್ ಆದ ಆಕೆ, ಅದರಲ್ಲಿ ಆತ ಮದುವೆಯಾಗಬೇಕಿದ್ದ ಯುವತಿಯೊಂದಿಗೆ ಮಾಡಿದ್ದ ಚಾಟ್ ಅನ್ನು ನೋಡಿದ್ದಾಳೆ. ಅಲ್ಲಿ ಆಕೆಗೆ ಆ ಯುವತಿಯ ಅಶ್ಲೀಲ ಫೋಟೊಗಳೂ ಸಿಕ್ಕಿವೆ. ಅದನ್ನು ಡೌನ್​ಲೋಡ್ ಮಾಡಿಟ್ಟುಕೊಂಡು, ಫೇಕ್​ ಅಕೌಂಟ್ ಒಂದರ ಮೂಲಕ ಆ ಫೋಟೋಗಳನ್ನು ಪೋಸ್ಟ್​ ಮಾಡಲಾರಂಭಿಸಿದ್ದಾಳೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅವಳು ಬಳಸುತ್ತಿದ್ದ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99