6 ನೇ ಮದುವೆಗೆ ಹೊರಟ ಸ್ವಯಂಘೋಷಿತ ಬಾಬಾ; ವಿಫಲಗೊಳಿಸಿದ 5 ನೇ ಪತ್ನಿ!
ಈ ಸ್ವಯಂ ಘೋಷಿತ ಬಾಬಾ ಅಂಜು ಈಗಾಗಲೇ ಐದು ಮದುವೆಯಾಗಿದ್ದು, ಕಾನೂನುಬದ್ಧವಾಗಿ ತನ್ನ ಮೊದಲಿನ ಪತ್ನಿಯರಿಗೆ ವಿಚ್ಛೇದನ ನೀಡದೆ ಆರನೇ ಬಾರಿ ಮದುವೆಯಾಗಲು ಸಿದ್ಧತೆ ನಡೆಸಿದ್ದ ಇದೀಗ ಆರನೇ ಮದುವೆಯಾಗಲು ಹೊರಟಿರುವುದಾಗಿ ಐದನೇ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಬಾಬಾನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2005ರಲ್ಲಿ ಮೊದಲ ಬಾರಿಗೆ ಯುವತಿಯೊಬ್ಬಳನ್ನು ವಿವಾಹವಾಗಿದ್ದ. 2010ರಲ್ಲಿ ಅಂಜು ಬರೇಲಿ ಜಿಲ್ಲೆಯ ಯುವತಿಯೊಬ್ಬಳನ್ನು ವಿವಾಹವಾಗಿದ್ದು, ಆಕೆ ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾಳೆ.ನಾಲ್ಕು ವರ್ಷಗಳ ನಂತರ ಸ್ವಯಂಘೋಷಿತ ಬಾಬಾ ಆಯುರೈಯಾ ಜಿಲ್ಲೆಯ ಯುವತಿಯೊಬ್ಬಳನ್ನು ವಿವಾಹವಾಗಿದ್ದ. ಈತನ ಹಿಂದಿನ ವಿವಾಹದ ರಹಸ್ಯ ತಿಳಿದ ನಂತರ ಮೂರನೇ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಳು, ಬಳಿಕ ಅಂಜು ಮೂರನೇ ಹೆಂಡತಿಯ ಸಂಬಂಧಿಯೊಬ್ಬಳನ್ನು ವಿವಾಹವಾಗಿದ್ದ. 2019ರಲ್ಲಿ ಐದನೇ ವಿವಾಹವಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಆರನೇ ಬಾರಿ ವಿವಾಹವಾಗಲು ಸಿದ್ಧತೆ ನಡೆಸಿದ ವೇಳೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.