-->

ಅಬ್ಬಬ್ಬಾ ಈ ಮಾವಿನ ಹಣ್ಣು ಕಿಲೋಗೆ 2.50 ಲಕ್ಷ ರೂ. ಅಂತೆ! ಅಂತದ್ದೇನಿದೆ ಇದರಲ್ಲಿ

ಅಬ್ಬಬ್ಬಾ ಈ ಮಾವಿನ ಹಣ್ಣು ಕಿಲೋಗೆ 2.50 ಲಕ್ಷ ರೂ. ಅಂತೆ! ಅಂತದ್ದೇನಿದೆ ಇದರಲ್ಲಿ

ಇಂದೋರ್: ಒಂದು ಕಿಲೋ ಮಾವಿನ ಹಣ್ಣಿಗೆ ಹೆಚ್ಚೆಂದರೆ 300-400 ರೂ. ರೇಟ್ ಇರಬಹುದು.‌ ಆದರೆ ಇಲ್ಲೊಂದು ಕಡೆ ಮಾವಿನ ಹಣ್ಣಿನ ಕಿಲೋ ಒಂದರ ಕ್ರಯ ಕೇಳಿದರೆ ಯಾರಾದರೂ ದಂಗಾಗಿ ಹೋಗಬೇಕು. 

ಜಪಾನ್ ಮೂಲದ ತಳಿಯ ಈ ಮಾವಿನ ಹಣ್ಣಿನ ಬೆಲೆ ಕಿಲೋ ಒಂದಕ್ಕೆ 2.70 ಲಕ್ಷ ರೂ‌. ಆಗಿದ್ದು, ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಹಣ್ಣು ಎಂದು ಹೆಗ್ಗಳಿಕೆ ಪಡೆದಿದೆ. ಈ ಮಾವಿನ ಹಣ್ಣು ಜಪಾನ್ ದೇಶದ ಮಿಯಾಝಾಕಿ ಎಂಬ ಊರಿನದ್ದು. ಅಲ್ಲಿ ಈ ಮಾವಿನ ಹಣ್ಣಿಗೆ ತಯ್ಯೋ ನೋ ಟೊಮೆಗೋ ಎಂದು ಕರೆಯುತ್ತಾರೆ. 


ಅಂದಹಾಗೆ, ಈ ದುಬಾರಿ ಬೆಲೆಯ ಮಾವಿನ ಹಣ್ಣುಗಳ ತಳಿಯ ಮರಗಳನ್ನು ಮಧ್ಯಪ್ರದೇಶದ ದಂಪತಿ ಬೆಳೆಸಿದ್ದಾರೆ. ಎರಡು ಸಣ್ಣ ಸಸಿಗಳನ್ನು ನೆಟ್ಟಿದ್ದು ಈಗ ಸಾಧಾರಣ ಗಾತ್ರಕ್ಕೆ ಮರವಾಗಿ ಬೆಳೆದು ನಿಂತಿದೆ. ವಿಶೇಷ ಅಂದ್ರೆ, ಈ ಎರಡು ಮಾವುಗಳ ಮರವನ್ನು ಕಳ್ಳಕಾಕರಿಂದ ಕಾಯುವುದಕ್ಕಾಗಿ ದಂಪತಿ ಡಜನ್ ಗಟ್ಟಲೆ ನಾಯಿಗಳನ್ನೂ ಸಾಕಿದ್ದಾರೆ. ಮಿಯಝಾಕಿ ಮಾವಿನ ಮರ ಬೆಳೆದು ಹಣ್ಣು ಬಿಡಲು ಅತಿ ಹೆಚ್ಚು ಸೂರ್ಯನ ಬೆಳಕು ಬೇಕಂತೆ. ಸುದೀರ್ಘ ಹಗಲು ಇರುವ ಅರ್ಥಾತ್ ಸೂರ್ಯನ ಬೆಳಕು ಬೀಳುವ ಪ್ರದೇಶಗಳಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತೆ. ಬಾಂಗ್ಲಾದೇಶ, ಫಿಲಿಫೈನ್ಸ್, ಇಂಡೋನೇಷ್ಯಾದಲ್ಲಿ ಈ ಹಣ್ಣನ್ನು ಬೆಳೆಯುತ್ತಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99