29 ಗಂಟೆಯಲ್ಲಿ ಸಿದ್ದವಾಯಿತು 10 ಮಹಡಿ ಕಟ್ಟಡ- ಎಲ್ಲಿ ಗೊತ್ತಾ?
Saturday, June 19, 2021
ಬೀಜಿಂಗ್: ಕೇವಲ 28 ಗಂಟೆ 45 ನಿಮಿಷಗಳಲ್ಲಿ 10 ಮಹಡಿಯ ಬಿಲ್ಡಿಂಗ್ ನಿರ್ಮಿಸಿ ಚೀನಾ ಇದೀಗ ಸಾಧನೆಯೊಂದನ್ನು ಮಾಡಿದೆ. ಈ ದಾಖಲೆಯ ಬಿಲ್ಡಿಂಗ್ ನಿರ್ಮಾಣದ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಚಾಂಗ್‌ಶಾದಲ್ಲಿರುವ ಬ್ರಾಡ್ ಗ್ರೂಪ್ ಎಂಬ ಸಂಸ್ಥೆ ಈ ಸಾಧನೆಯನ್ನು ಮಾಡಿದ್ದು ಮಹಡಿಯ ಎಲ್ಲ ವಿನ್ಯಾಸಗಳನ್ನು ಮೊದಲೇ ಇಂಡಸ್ಟ್ರಿಯಲ್ಲಿ ತಯಾರಿಸಿಟ್ಟುಕೊಂಡಿತ್ತು. ನಂತರ ಅದನ್ನು ಬಿಲ್ಡಿಂಗ್ ನಿರ್ಮಿಸಬೇಕಾಗಿದ್ದ ಜಾಗಕ್ಕೆ ತಂದು ಒಂದರ ಮೇಲೆ ಒಂದರಂತೆ ಇಟ್ಟು ಬೋಲ್ಟ್ ಮತ್ತು ನಟ್ಗಳಿಂದ ಕನೆಕ್ಟ್ ಮಾಡಲಾಗಿದೆ. ಪೂರ್ತಿ ವಿನ್ಯಾಸವಾದ ನಂತರ ಅದಕ್ಕೆ ವಿದ್ಯುತ್ ಮತ್ತು ನೀರು ಸರಬರಾಜಿನ ವ್ಯವಸ್ಥೆ ಮಾಡಲಾಗಿದೆ. ಈ ರೀತಿ ಒಂದೇ ಸ್ಥಳದಲ್ಲಿ ಬಿಲ್ಡಿಂಗ್ ನಿರ್ಮಿಸಲು ತಗುಲಿದ ಸಮಯ 28 ಗಂಟೆ 45 ನಿಮಿಷ.
ಬಿಲ್ಡಿಂಗ್ ನಿರ್ಮಾಣ ಅತ್ಯಂತ ಸುಲಭವಾಗಿತ್ತು ಎಂದು ಬಿಲ್ಡಿಂಗ್ ನಿರ್ಮಾಣದಲ್ಲಿ ತೊಡಗಿಸಿಕೊಂಡವರು ಹೇಳಿದ್ದಾರೆ.