ಸೆಕ್ಸಿಯಾಗಿ ಮಾತನಾಡುವ ಮಹಿಳೆಯರಿಗೆ 5 ಲಕ್ಷ ರೂ.! ಈ ದಂಪತಿಗಳು ಗಳಿಸಿದ ಹಣ ಎಷ್ಟು ಗೊತ್ತಾ?
Monday, June 21, 2021
ಚೆನ್ನೈ: ಮಹಿಳೆಯರೊಂದಿಗೆ ಪಬ್ಜಿ ಆಡುತ್ತಾ ಅವರೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದ ಆಡಿಯೋವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿ ಲಾಭ ಮಾಡುತ್ತಿದ್ದ ಯೂಟ್ಯೂಬ್ ಬರ್ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೋರ್ನೋಗ್ರಫಿಕ್ ಆಡಿಯೋ ಮೂಲಕವೇ ಪಬ್ಜಿ ಮದನ್ ಕೇವಲ ಮೂರು ವರ್ಷದಲ್ಲಿ ಬರೋಬ್ಬರಿ 75 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ ಹಾಗೆಯೇ ಮದನ್ ಮತ್ತು ಪತ್ನಿ ಕೃತಿಕಾ ಬ್ಯಾಂಕ್ ಖಾತೆಯಲ್ಲಿದ್ದ 4 ಕೋಟಿ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.
ಪಬ್ಜಿ ಆಡುವಾಗಲೇ ಮಹಿಳೆಯರೊಂದಿಗೆ ಅಶ್ಲೀಲವಾಗಿ ಮಾತನಾಡಿ ಅದನ್ನು ರೆಕಾರ್ಡ್ ಮಾಡಿ ಯೂಟ್ಯೂಬ್ನಲ್ಲಿ ಮದನ್ ಹರಿಬಿಡುತ್ತಿದ್ದ. ಆತ ಮಾಡುವ ಕೆಲಸಕ್ಕೆ ಆತನ ಹೆಂಡತಿ ಕೂಡ ಸಾಥ್ ನೀಡುತ್ತಿದ್ದಳು. ತನ್ನ ಜತೆ ಬಹಳ ಸೆಕ್ಸಿಯಾಗಿ ಮಾತನಾಡುವ ಮಹಿಳೆಯರಿಗೆ 5 ಲಕ್ಷ ರೂ.ವರೆಗೂ ಹಣ ನೀಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಮದನ್ ಜತೆ ಅಶ್ಲೀಲವಾಗಿ ಮಾತನಾಡಿರುವ ಮಹಿಳೆಯರನ್ನು ಸಹ ಪಟ್ಟಿ ಮಾಡಲಾಗುತ್ತಿದೆ. ಮದನ್ನನ್ನು ಜೈಲಿಗೆ ಕಳುಹಿಸಲು ಸಕಲ ಪ್ರಯತ್ನಗಳು ನಡೆಯುತ್ತಿದ್ದು, ಇದರ ನಡುವೆ ಮದನ್ ನಿರೀಕ್ಷಣಾ ಜಾಮೀನಿಗೆ ಗುರುವಾರ ಅರ್ಜಿಯನ್ನು ಸಲ್ಲಿಸಿದ್ದಾನೆ.