
ಬಾಯ್ ಫ್ರೆಂಡ್ ಗಾಗಿ 175 ಕೋಟಿ ರೂ. ಖರ್ಚು ಮಾಡಿದ ಬಾಲಿವುಡ್ ನಟಿ..!!
Monday, June 21, 2021
ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸುಮಾರು 175 ಕೋಟಿ ರೂ. ಬೆಲೆ ಬಾಳುವ ಬಂಗಲೆಯನ್ನು ತನ್ನ ಬಾಯ್ ಫ್ರೆಂಡ್ ಜೊತೆ ಇರಲು ಖರೀದಿಸಿದ್ದಾರೆ.
ದಂಪತಿಗಳು ಸ್ವಲ್ಪ ಸಮಯದ ಬಳಿಕ ಒಟ್ಟಿಗೆ ಸ್ಥಳಾಂತರಗೊಳ್ಳಲು ಬಯಸುತ್ತಿದ್ದಾರೆ ಮತ್ತು ಅಂತಿಮವಾಗಿ ಅವರು ಜುಹುದಲ್ಲಿನ ಆಸ್ತಿಯೊಂದನ್ನು ಖಾಲಿ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಅವರು ಅಂತಿಮಗೊಳಿಸಿದ ಮನೆ ಜುಹುವಿನ ಪ್ರಮುಖ ಸ್ಥಳದಲ್ಲಿದ್ದು, ಜಾಕ್ವೆಲಿನ್ ಫರ್ನಾಂಡೀಸ್ ಶಾಶ್ವತವಾಗಿ ಮುಂಬೈನಲ್ಲಿ ಉಳಿಯಲಿದ್ದಾರೆ. ದಂಪತಿಗಳು ತಮ್ಮ ಮನೆಯ ಒಳಾಂಗಣ ವಿನ್ಯಾಸ ಮಾಡಲು ಫ್ರಾನ್ಸ್‌ನ ಇಂಟೀರಿಯರ್ ಡಿಸೈನರ್‌ನನ್ನು ನೇಮಿಸಿದ್ದಾರೆಂದು ತಿಳಿದುಬಂದಿದೆ.