
ಗಂಡಸರು 10 ಮದುವೆ ಆಗಬಹುದು, ಹೆಣ್ಣು ಯಾಕೆ ಆಗಬಾರದು? ಎಂದು ಪ್ರಶ್ನಿಸಿದ ನಟಿ ಶೆಫಾಲಿ ಜರಿವಾಲ
'ಹುಡುಗರು' ಸಿನಿಮಾದಲ್ಲಿ ನಟಿಸಿದ್ದ ನಟಿ ಶೆಫಾಲಿ ಜರಿವಾಲ ಅವರ ಮೊದಲ ಮದುವೆ ಮುರಿದು ಬಿದ್ದಿದ್ದು, ಈಗ ಎರಡನೇ ಮದುವೆಯಾಗಿದ್ದಾರೆ.
ವೈವಾಹಿಕ ಜೀವನದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಶೆಫಾಲಿ "ಮದುವೆ ಮುರಿದು ಬಿದ್ದಾಗ ಜೀವನ ಮುಗಿಯಿತು ಎಂದು ಅಂದುಕೊಳ್ಳುವುದುಂಟು, ನಿಜಕ್ಕೂ ಅದು ಕಷ್ಟವೇ. ನಾನು ಚಿಕ್ಕ ವಯಸ್ಸಿನಲ್ಲಿ ಮದುವೆಯಾದೆ, ವಿಚ್ಛೇದನವೂ ಆಯ್ತು. ನನಗೆ ಅದೆಲ್ಲ ಕಷ್ಟವಾಗಿದ್ದರೂ ಕೂಡ ನನ್ನ ಪಾಲಕರು, ಸ್ನೇಹಿತರು ನನ್ನ ಪರ ನಿಂತರು. ಹೀಗಾಗಿ ಅದರಿಂದ ಹೊರಗೆ ಬಂದೆ. ಪ್ರೀತಿಯನ್ನು ನಂಬದಿರುವ ಸಮಯ ಕೂಡ ಬರುವುದು. ಮತ್ತೆ ನಾನು ಪ್ರೀತಿ ಮಾಡುವೆ, ಮದುವೆಯಾಗ್ತೀನಿ ಎಂದು ಅಂದುಕೊಂಡಿರಲಿಲ್ಲ" ಎಂದು ಶೆಫಾಲಿ ಹೇಳಿದ್ದಾರೆ.
ಗಂಡಸರು 10 ಮದುವೆ ಆಗಬಹುದು, ಹೆಣ್ಣು ಯಾಕೆ ಆಗಬಾರದು? ಹೆಣ್ಣು ಬೋಲ್ಡ್ ಇದ್ದಾಳೆ, ಅವಳದ್ದೇ ತಪ್ಪು ಅಂತ ಹೇಗೆ ಹೇಳ್ತೀರಿ? ಎಂದು ಪ್ರಶ್ನಿಸಿದ್ದಾರೆ. 2004ರಲ್ಲಿ ಶೆಫಾಲಿ ಅವರು ಹರ್ಮೀತ್ ಸಿಂಗ್ ಅವರನ್ನು ಮದುವೆಯಾದರು. 2009ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿತು. 2014ರಲ್ಲಿ ಶೆಫಾಲಿ ಅವರು ಪರಾಗ್ ತ್ಯಾಗಿ ಅವರನ್ನು ಮದುವೆಯಾದರು.