
ಹುಟ್ಟುತ್ತಲೆ ಗರ್ಭಾಶಯ ಇಲ್ಲದಿದ್ದರೂ ಮಗುವಿಗೆ ಜನ್ಮ ನೀಡಿದ ಮಹಿಳೆ.... !!
ಕ್ಯಾಲಿಫೋರ್ನಿಯಾ: ಹುಟ್ಟುವಾಗಲೇ ಗರ್ಭಾಶಯ ಇಲ್ಲದ ಮಹಿಳೆ ಮಗುವಿಗೆ ಜನ್ಮ ನೀಡಿರುವ ಅದ್ಭುತ ಘಟನೆ ಅಮೆರಿಕದ ಉಟಾಹ್‌ನಲ್ಲಿ ನಡೆದಿದೆ.
17 ವರ್ಷ ಇರುವಾಗಲೇ ಅಮಂಡಾ ಗ್ರುನೆಲ್ ಅವರಿಗೆ ತಮಗೆ ಗರ್ಭಾಶಯ ಇಲ್ಲ ಎಂದು ತಿಳಿದಿತ್ತು. ಏಕೆಂದರೆ ಅವರಿಗೆ ಮಾಸಿಕ ಋತುಸ್ರಾವ ಆಗುತ್ತಿರಲಿಲ್ಲ. ಇದರಿಂದ ಅವರು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿದಾಗ ಅವರಿಗೆ ಗರ್ಭಾಶಯ ಇಲ್ಲ ಎಂಬುದು ತಿಳಿದುಬಂದಿದೆ.ಆದ್ದರಿಂದ ಅವರಿಗೆ ಮಗುವನ್ನು ಹೆರಲು ಸಾಧ್ಯವಿಲ್ಲ ಎನ್ನುವುದನ್ನು ವೈದ್ಯರು ಹೇಳಿದರು. ಆದರೆ ಹೆಣ್ಣಾಗಿ ಮಗು ಹೆರದಿದ್ದರೆ ಹೇಗೆ ಎಂದು ಚಿಂತಿಸಿದ ಅಮಂಡಾ, ಈ ಬಗ್ಗೆ ವೈದ್ಯರಲ್ಲಿ ಚರ್ಚಿಸಿದರು. ನಂತರ ಅವರಿಗೆ ಗರ್ಭಾಶಯದ ಕಸಿಯ ಬಗ್ಗೆ ವಿವರಣೆ ನೀಡಲಾಯಿತು. ಈ ವೇಳೆ ಮೃತಪಟ್ಟ ಮಹಿಳೆಯೊಬ್ಬರ ಗರ್ಭಾಶಯವನ್ನು ಇವರಿಗೆ ಕಸಿ ಮಾಡಲಾಯಿತು. ಈಗ ಆ ಗರ್ಭದಿಂದ ಮಗುವನ್ನು ಪಡೆದಿಪಡೆದಿದ್ದಾರೆ.