ಮದುವೆಯಾಗಲು ನಿರಾಕರಿಸಿದ ಪ್ರಿಯಕರ- ಪೊಲೀಸರ ಸಮ್ಮುಖದಲ್ಲಿ ಒಂದಾದ ಪ್ರೇಮಿಗಳು..
ಕೊಳ್ಳೇಗಾಲ: ಮದುವೆಯಾಗಲು ನಿರಾಕರಿಸಿದ ಪ್ರಿಯತಮನಿಗಾಗಿ ಯುವತಿಯೋರ್ವಳು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಪೊಲೀಸರೇ ಮುಂದೆ ನಿಂತು ಇವರಿಬ್ಬರ ಮದುವೆ ಮಾಡಿಸಿದ್ದಾರೆ
ಪಟ್ಟಣ ವ್ಯಾಪ್ತಿಯ ಶಂಕನಪುರ ಬಡಾವಣೆಯ ರಾಕೇಶ್ ಹಾಗೂ ಮುಳ್ಳೂರು ಗ್ರಾಮದ ಗೌರಿ, ಇಬ್ಬರು ಕಳೆದ ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ರಾಕೇಶ್ ಪೋಷಕರು ಇವರ ಪ್ರೀತಿಯನ್ನು ಒಪ್ಪಿಕೊಳ್ಳದೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ರಾಕೇಶ್ ಕಳೆದ ಒಂದು ತಿಂಗಳಿಂದೀಚೆಗೆ ಗೌರಿಯನ್ನು ನಿರಾಕರಿಸುತ್ತಿದ್ದ. ಈಕೆಯನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದ ಇದರಿಂದ ಮನನೊಂದ ಗೌರಿ ಹಾಗೂ ಆಕೆಯ ಪೋಷಕರು ಕಳೆದ 10 ದಿನಗಳ ಹಿಂದೆ ಪ್ರಿಯಕರನ ವಿರುದ್ದ ಕೊಳ್ಳೇಗಾಲ ಪಟ್ಟಣ ಠಾಣೆ ಮೆಟ್ಡಿಲೇರಿದ್ದರು.
ಈ ವೇಳೆ ಪೊಲೀಸರು ಗ್ರಾಮದಲ್ಲಿ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿ ಕಳುಹಿಸಿದ್ದರು. ಎರಡು ಗ್ರಾಮಗಳ ಮುಖಂಡರ ಸಮ್ಮುಖದಲ್ಲಿ ವಿಚಾರ ನಡೆಸಿ ಪ್ರೇಮಿಗಳನ್ನು ಒಂದುಗೂಡಿಸುವ ಕಾರ್ಯಮಾಡಿದ್ದಾರೆ. ಬಳಿಕ ಗ್ರಾಮಸ್ಥರ ಸಮ್ಮುಖದಲ್ಲಿ ಶಂಕನಪುರದ ದೇವಸ್ಥಾನದಲ್ಲಿ ಪ್ರೇಮಿಗಳಿಬ್ಬರಿಗೂ ಮದುವೆ ನಡೆಸಲಾಗಿದೆ.