ಮಂಗಳೂರು; ಆ್ಯಪ್ ಮೂಲಕ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್- ಆರು ಬುಕ್ಕಿಗಳು ಬಂಧನ - Video
Tuesday, May 4, 2021
ಮಂಗಳೂರು: ಆ್ಯಪ್ ಮೂಲಕ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸಿ ಹಣ ಸಂಗ್ರಹಿಸುತ್ತಿದ್ದ ಆರು ಮಂದಿ ಬುಕ್ಕಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ
ಕೃಷ್ಣಾಪುರ ನಿವಾಸಿ ಧನಪಾಲ್ ಶೆಟ್ಟಿ, ಮೂಲತಃ ರಾಜಸ್ಥಾನ ಮೂಲದ ಸುರತ್ಕಲ್ ನಿವಾಸಿ ಕಮಲೇಶ್, ಮಂಗಳೂರಿನ ಕುಂಪಲ ನಿವಾಸಿ ವಿಕ್ರಂ, ಮುಂಬೈ ನಿವಾಸಿ ಹರೀಶ್ ಶೆಟ್ಟಿ, ಅಶೋಕನಗರ ನಿವಾಸಿ ಪ್ರೀತೇಶ್, ಉರ್ವ ಮಾರಿಗುಡಿ ನಿವಾಸಿ ಅವಿನಾಶ್ ಬಂಧಿತರು.
ಬಂಧಿತರು ಸ್ಟಾರ್ ಆ್ಯಪ್ ಹಾಗೂ ಲೋಟಸ್ ಬುಕ್247 ಬೆಟ್ ಎಂಬ ಆ್ಯಪ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದರು. ಇವರು ಬೇರೆ ಬೇರೆಯವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು online ಮೂಲಕ ಹಣ ಸಂಗ್ರಹಿಸಿ ಮೋಸದಿಂದ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದರು. ಈ ಪ್ರಕರಣವನ್ನು ಭೇದಿಸಿರುವ ಮಂಗಳೂರಿನ ಸಿಸಿಬಿ ಹಾಗೂ ಇಎನ್ ಸಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಗಾಗಿ ಬುಕ್ಕಿಗಳು ತೆರೆದಿರುವ ಆ್ಯಕ್ಸಿಸ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ಗಳ ಸುಮಾರು 20ಖಾತೆಗಳನ್ನು ಮುಟ್ಟುಗೋಲು ಹಾಕಿ, ಅದರಲ್ಲಿದ್ದ 20ಲಕ್ಷ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳ ಬಳಿಯಲ್ಲಿದ್ದ 3ಲಕ್ಷ ರೂ. ನಗದು ಹಾಗೂ ಆನ್ಲೈನ್ ಬೆಟ್ಟಿಂಗ್ ಆಡಲು ಉಪಯೋಗಿಸುತ್ತಿದ್ದ 10 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ