ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಮಂಗಳೂರು ವಿವಿಯ ಪದವಿ ವಿದ್ಯಾರ್ಥಿಗಳಿಗೆ ಮೇ 10 ರಿಂದ ಆನ್‌ಲೈನ್‌ ತರಗತಿ


ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ವಿದ್ಯಾರ್ಥಿಗಳಿಗೆ ಮೇ 10 (ಸೋಮವಾರ) ರಿಂದ ಆನ್‌ಲೈನ್‌ ತರಗತಿಗಳನ್ನು ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಮಂಗಳೂರು ವಿವಿಯ ಎಲ್ಲಾ ಸಂಯೋಜಿತ/ಸ್ವಾಯತ್ತ/ಘಟಕ ಕಾಲೇಜುಗಳಲ್ಲಿ 2020-21ನೇ ಸಾಲಿನ  ಸ್ನಾತಕ ಕಾರ್ಯಕ್ರಮಗಳ ದ್ವಿತೀಯ, ಚತುರ್ಥ ಮತ್ತು ಆರನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಮೇ 10 (ಸೋಮವಾರ) ರಿಂದ ಆನ್‌ಲೈನ್‌ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

 ಮಂಗಳವಾರ ನಡೆದ ಪ್ರಾಂಶುಪಾಲರುಗಳ ಆನ್‌ಲೈನ್‌ ಸಭೆಯಲ್ಲಿ ಎಲ್ಲರ ಅಭಿಪ್ರಾಯದಂತೆ ಈ ತೀರ್ಮಾನಕ್ಕೆ ಬರಲಾಗಿದೆ.

ವಿವಿಯ ಪ್ರಥಮ, ತೃತೀಯ ಮತ್ತು ಪಂಚಮ ಸೆಮಿಸ್ಟರ್‌ ಪರೀಕ್ಷೆಗಳು ಮತ್ತು ಭೌತಿಕ ತರಗತಿಗಳ ದಿನಾಂಕಗಳನ್ನು ಸರ್ಕಾರದ ಅನುಮತಿಯ ಬಳಿಕ ಪ್ರಕಟಿಸಲು ಸಭೆ ತೀರ್ಮಾನಿಸಲಾಗಿದೆ
ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW