![SHOCKING NEWS: ಪ್ರಾಣಿಗಳಿಗೂ ಬರುತ್ತೆ ಕೊರೋನಾ-ಹೈದರಾಬಾದ್ ಝೂನ 8 ಸಿಂಹಗಳಿಗೆ ಕೊರೋನಾ ಪಾಸಿಟಿವ್ SHOCKING NEWS: ಪ್ರಾಣಿಗಳಿಗೂ ಬರುತ್ತೆ ಕೊರೋನಾ-ಹೈದರಾಬಾದ್ ಝೂನ 8 ಸಿಂಹಗಳಿಗೆ ಕೊರೋನಾ ಪಾಸಿಟಿವ್](https://blogger.googleusercontent.com/img/b/R29vZ2xl/AVvXsEhjYT0rXvIEHaa12qpK2t1aUVvGVyb0Cp1EGvgJNobgWrSof7A2PLS9FrJakZKTlkrf38h1m90XGdG-dsjpW2IMTXqOW2gcZa_xOS_gMx9tHvaTakrjBM8OhJYQsAhZHtqF7vCY10GUutk/s1600/1620141610919315-0.png)
SHOCKING NEWS: ಪ್ರಾಣಿಗಳಿಗೂ ಬರುತ್ತೆ ಕೊರೋನಾ-ಹೈದರಾಬಾದ್ ಝೂನ 8 ಸಿಂಹಗಳಿಗೆ ಕೊರೋನಾ ಪಾಸಿಟಿವ್
Tuesday, May 4, 2021
ಹೈದರಾಬಾದ್: ಇಷ್ಟರವರೆಗೆ ಕೇವಲ ಮನುಷ್ಯರಲ್ಲಿ ಮಾತ್ರ ಕಂಡು ಬರುತ್ತಿದ್ದ ಕೊರೋನಾ ಪ್ರಕರಣಗಳು ಈಗ ಪ್ರಾಣಿಗಳಲ್ಲೂ ಕಾಣಿಸತೊಡಗಿದೆ.
ಕೊರೋನಾ ಆರಂಭಿಕ ಹಂತದಲ್ಲಿ ಇದು ಪ್ರಾಣಿಗಳಿಗೆ ಹರಡುವುದಿಲ್ಲ ಎಂದು ಸಂಶೋಧನಾ ವರದಿ ತಿಳಿಸಿತ್ತು. ಆದರೆ ಅದಕ್ಕೆ ತದ್ವಿರುದ್ಧವಾದ ಘಟನೆಯೊಂದು ಹೈದರಾಬಾದ್ ನ ನೆಹರು ಪ್ರಾಣಿಸಂಗ್ರಹಾಲಯದಲ್ಲಿ ನಡೆದಿದೆ.
ಇಲ್ಲಿನ ಕೆಲವು ಪ್ರಾಣಿಗಳಲ್ಲಿ ಕೊರೋನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಾಣಿಗಳ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗಿತ್ತು. ಆದರೆ ಫಲಿತಾಂಶ ಬಂದಾಗ ಮಾತ್ರ ಝೂನ ಮೇಲ್ವಿಚಾರಕರಿಗೆ ಆತಂಕ ಕಾದಿತ್ತು. ಯಾಕೆಂದರೆ ಇಲ್ಲಿನ ಪ್ರಾಣಿಗಳ ಪೈಕಿ 8 ಸಿಂಹಗಳಿಗೆ ಕೊರೋನಾ ಬಾಧಿಸಿತ್ತು.
ಸದ್ಯ ಈ ಎಲ್ಲಾ ಸಿಂಹಗಳು ವೈದ್ಯಕೀಯ ನಿಗಾದಲ್ಲಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು ತಿಳಿಸಿದ್ದಾರೆ.