ನೇತ್ರಾವತಿ ಒಡಲಿಗೆ ಎಸೆದರು ಕಸ- ಪೊಲೀಸರಿಂದ ಕಾರು ವಶ - Video
Saturday, May 1, 2021
ಮಂಗಳೂರು; ಮಂಗಳೂರಿನಲ್ಲಿ ನೇತ್ರಾವತಿ ಒಡಲಿಗೆ ಕಸ ಎಸೆದ ಮಹಿಳೆಯರ ವಿಡಿಯೋ ಇವತ್ತು ವೈರಲ್ ಆಗುತ್ತಿದ್ದಂತೆ ಮಂಗಳೂರು ಪೊಲೀಸರು ಕಾರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. Ka03Nb4648 ಕಾರಿನಲ್ಲಿ ಬಂದ ಮಹಿಳೆಯರು ಸೇತುವೆಯಲ್ಲಿ ಕಾರು ನಿಲ್ಲಿಸಿ ಕಸ ಎಸೆದಿದ್ದಾರೆ. ಇದರ ವಿಡಿಯೋ ವೈರಲ್ ಅದ ಬಳಿಕ ಕಂಕನಾಡಿ ಠಾಣೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಿರಿಯ ಆರೋಗ್ಯ ನಿರೀಕ್ಷಕರು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಕಂಕನಾಡಿ ಪೊಲೀಸರು ಕಾರು ವಶಪಡಿಸಿಕೊಂಡು ಕಸ ಎಸೆದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿಯೂ ಪ್ರಕರಣ ದಾಖಲು ಮಾಡಲಾಗಿದೆ.