
ನಿಮ್ಗೆ 3000 ಫೈನ್ ಅಲ್ವ, ಅದು ಕಟ್ತೇನೆ, ಆಮೇಲ್ ಮಾತಾಡ್ತೇನೆ: ರೂಲ್ಸ್ ಬ್ರೇಕ್ ಮಾಡಿದ ಯುವತಿಯಿಂದ ಟ್ರಾಫಿಕ್ ಪೊಲೀಸರಿಗೇ ಆವಾಝ್ - Video
Saturday, May 1, 2021
ಡ್ರೈವಿಂಗ್‌ನಲ್ಲಿ ಮಾತಾಡ್ಬೇಡ ಎಂದಿದ್ದ ಪೊಲೀಸ್ ಗೆ ಇನ್ನೂ ಮಾತಾಡ್ತೀನಿ ಅಂದ್ಳು ಈ ಯುವತಿ
ಉಡುಪಿ: ಮೊಬೈಲ್‌ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದ ಯುವತಿಗೆ ಬುದ್ಧಿಮಾತು ಹೇಳಿದ ಟ್ರಾಫಿಕ್ ಎಸ್ಸೈ ವಿರುದ್ಧ ಯುವತಿಯೋರ್ವಳು ದರ್ಪದಿಂದ ಮಾತನಾಡಿರುವ ಘಟನೆ ಉಡುಪಿಯ ಕ್ಲಾಕ್ ಟವರ್ ಬಳಿ ನಡೆದಿದೆ.
ಮೊಬೈಲ್ ನಲ್ಲಿ ಮಾತನಾಡುತ್ತಾ ಯುವತಿಯೋರ್ವಳು ಕಾರು ಚಲಾಯಿಸುತ್ತಿದ್ದ ಘಟನೆ ಲಾಕ್‌ಡೌನ್ ಕರ್ತವ್ಯದಲ್ಲಿದ್ದ ಪೊಲೀಸರ ಕಣ್ಣಿಗೆ ಬಿದ್ದಿತ್ತು. ಈ ನಿಟ್ಟಿನಲ್ಲಿ ಟ್ರಾಫಿಕ್ ಎಸ್ಸೈ ಅಬ್ದುಲ್ ಖಾದರ್ ಕಾರು ಬದಿಗೆ ನಿಲ್ಲಿಸಿ ಮಾತನಾಡುವಂತೆ ಯುವತಿಗೆ ಸೂಚಿಸಿದ್ದರು.ಇದರಿಂದ ಕೆರಳಿದ ಯುವತಿಯು ಪೊಲೀಸರೊಂದಿಗೆ ಉಡಾಫೆಯಿಂದ ವರ್ತಿಸಿದ್ದು, ದರ್ಪದಿಂದ ಮಾತನಾಡಿದ್ದಾಳೆ.
ಈಕೆಯ ವರ್ತನೆಯನ್ನು ಚಿತ್ರಿಸುತ್ತಿದ್ದ ಪೊಲೀಸರಿಗೂ ಯುವತಿ ಆವಾಝ್ ಹಾಕಿದ್ದು, ನನಗೆ ಬೇರೆ ತುಂಬಾ ಕೆಲಸ ಇದೆ. ನಿಮಗೆ ಮೂರು ಸಾವಿರ ರೂ. ಫೈನ್ ತಾನೇ ಅದನ್ನು ಕಟ್ತೀನಿ. ಮತ್ತೆ ಮಾತಾಡುವ ಎಂದು ದರ್ಪದಿಂದ ಮಾತನಾಡಿದ್ದಳು. ದಂಡ ಕಟ್ಟಿ ಹೊರಡುವಾಗ ನಾನು ಇನ್ನೂ ಮಾತಾಡ್ತೀನಿ ಅಂತ ಮತ್ತೆ ಪೊಲೀಸರಿಗೆ ಅವಾಝ್ ಹಾಕಿ ಮಹಿಳೆ ತೆರಳುತ್ತಿರುವುದು ವೀಡಿಯೋ ದಲ್ಲಿ ಸೆರೆಯಾಗಿದೆ.