ಲಾಕ್ ಡೌನ್ ಎಫೆಕ್ಟ್; ಮಂಗಳೂರಿನಲ್ಲಿ ಪೊಲೀಸರ ಹೆಂಡ್ತಿಯರು ಹೀಗೆ ಮಾಡಿದ್ರು...
Saturday, May 1, 2021
ಮಂಗಳೂರು: ಕೋರೋನಾ ಎರಡನೇ ಅಲೆ ದೇಶದಾದ್ಯಂತ ತಾಂಡವವಾಡುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಎರಡು ವಾರಗಳ ಲಾಕ್‌ಡೌನ್ ಘೋಷಿಸಿದೆ. ಲಾಕ್‌ಡೌನ್ ನಡುವೆ ಪೊಲೀಸರ ಡ್ಯೂಟಿಯೂ ಹೆಚ್ಚಿದ. ಆದರೆ ಈ ನಡುವೆ ಮನೆಯಲ್ಲಿಯೇ ಇದ್ದ ಪೊಲೀಸರ ಪತ್ನಿಯರು ಏನು ಮಾಡಿದ್ದಾರೆ ಗೊತ್ತಾ.
ಹೌದು ಕೊರೋನಾ ಡ್ಯೂಟಿಯಲ್ಲಿರುವ ಪೊಲೀಸರಿಗಾಗಿ ಅವರ ಪತ್ನಿಯರು, ಅಕ್ಕ ತಂಗಿಯರು ತಾವೇ ಮಾಸ್ಕ್ ತಯಾರಿಸಿ ನೀಡುವ ಮೂಲಕ ನೆರವಾಗುತ್ತಿದ್ದಾರೆ.
ಮಂಗಳೂರಿನ ಪೊಲೀಸ್ ಲೇನ್ ನಲ್ಲಿ ರುವ ಪೊಲೀಸ್ ಕ್ವಾರ್ಟರ್ಸ್ ನ ಮಹಿಳೆಯರು ಸ್ವತಃ ತಾವೇ ಮಾಸ್ಕ್ ಸ್ಟಿಚಿಂಗ್ ಮಾಡತೊಡಗಿದ್ದಾರೆ. ಇಲ್ಲಿನ ಜ್ಞಾನೋದಯ ಮಹಿಳಾ ಮಂಡಲದಲ್ಲಿ ಸುಮಾರು 8 ಮಂದಿಯಷ್ಟು ಮಹಿಳೆಯರು ಮಾಸ್ಕ್ ಹೊಲಿಯುತ್ತಿದ್ದಾರೆ.
ಪೊಲೀಸರ ಯುನಿಫಾರ್ಮ್‌ಗೆ ಹೊಂದುವಂತೆ ಖಾಕಿ ಬಣ್ಣದ ಮಾಸ್ಕ್ ಇಲ್ಲಿ ತಯಾರಾಗುತ್ತಿದ್ದು, ಇದಕ್ಕೆ ಬೇಕಾಗುವ ಬಟ್ಟೆ, ನೂಲು ಮತ್ತು ಎಲಾಸ್ಟಿಕ್ ಪೊಲೀಸ್ ಕಮಿಷನರೇ ಒದಗಿಸುತ್ತಿದ್ದಾರೆ.
ಅಲ್ಲದೆ ಇವರ ಕಾರ್ಯಕ್ಕೆ ಮೆಚ್ಚಿ ಪೊಲಿಸ್ ಕಮಿಷನರ್ ಶಶಿಕುಮಾರ್ ಗೌರವಧನ ನೀಡುವುದಾಗಿ ಭರವಸೆ ನೀಡಿದ್ದಾರೆ.