ಮಂಗಳೂರು; ಮುಕ್ಕ ಶ್ರೀನಿವಾಸ ಆಸ್ಪತ್ರೆ ಸಿಬ್ಬಂದಿ ಎಡವಟ್ಟು- ಅದಲು ಬದಲಾಯಿತು ಶವ
Monday, May 17, 2021
ಮಂಗಳೂರು; ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ ಆಸ್ಪತ್ರೆಯಲ್ಲಿ ಸಿಬ್ಬಂದಿಯ ಎಡವಟ್ಟಿನಿಂದ ವಾರಸುದಾರ ರಿಗೆ ಶವ ಅದಲು ಬದಲು ಮಾಡಿ ನೀಡುದ ಘಟನೆ ನಡೆದಿದೆ.
ಮುಕ್ಕ ಶ್ರೀನಿವಾಸ್ ಆಸ್ಪತ್ರೆಯಲ್ಲಿ ಸುರತ್ಕಲ್ ರೀಜನ್ ಪಾರ್ಕ್ ನಿವಾಸಿ ಜಗದೀಶ್ ಕುಂದರ್(65) ಹಾಗೂ
ಕಾರ್ಕಳ ನಿವಾಸಿ ಸುಧಾಕರ ಶೆಟ್ಟಿ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.ಇವರ ಮೃತದೇಹವನ್ನು ಮೃತರ ಮನೆಯವರು ಇಂದು ಬೆಳಿಗ್ಗೆ ಕೊಂಡೊಯ್ದಿದ್ದರು. ಆದರೆ ಜಗದೀಶ್ ಕುಂದರ್ ಅವರ ಮನೆಯವರಿಗೆ ನೀಡಿದ ಶವ ಬದಲಾಗಿರುವುದು ತಿಳಿದುಬಂದಿದೆ. ಕಾರ್ಕಳ ಕೊಂಡೊಯ್ದಿದ್ದ ಮೃತ ಸುಧಾಕರ್ ಶೆಟ್ಟಿ ಅವರ ಮನೆಯವರಿಗೂ ಮೃತದೇಹ ಬದಲಾಗಿರುವುದು ತಿಳಿದುಬಂದಿದೆ. ವಿಚಾರ ತಿಳಿದ ಬಳಿಕ ಎರಡು ಮನೆಯವರು ಮೃತದೇಹವನ್ನು ಆಸ್ಪತ್ರೆಗೆ ತಂದು ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಶವವನ್ನು ಕೊಂಡೋಗಿದ್ದಾರೆ.
ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ ದಿಂದ ಈ ಎಡವಟ್ಟು ಆಗಿದ್ದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.