ಪತಿಗೆ ಸವಾಲೆಸೆದು ಪರಪುರುಷನೊಂದಿಗೆ ಮಲಗಿದಳು: Red Hand ಆಗಿ ಸಿಕ್ಕಿಬಿದ್ದಾಗ ಪತಿ ಮಾಡಿದ್ದೇನು ಗೊತ್ತಾ?
Wednesday, May 26, 2021
ಸೂರತ್: ತನ್ನ ಪತ್ನಿಯನ್ನು ಪರ ಪುರಷನೊಂದಿಗೆ ನೋಡಬಾರದ ಸ್ಥಿತಿಯಲ್ಲಿ ನೋಡಿದ ಪತಿ, ಅವರಿಬ್ಬರನ್ನೂ ಮನೆಯಿಂದ ಹೊರಗೆಳೆದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ಇಲ್ಲಿನ ವಲ್ಸಡ್ ಜಿಲ್ಲೆಯ ಕಜ್ಲಿಯಲ್ಲಿ ನಡೆದಿದೆ.
ಪತಿಗೆ ಪತ್ನಿಯ ಅನೈತಿಕ ಸಂಬಂಧದ ಕುರಿತಂತೆ ಈ ಹಿಂದೆಯೇ ಅನುಮಾನವಿತ್ತು. ಈ ನಿಟ್ಟಿನಲ್ಲಿ ಅವರಿಬ್ಬರ ನಡುವೆ ಗಲಾಟೆಗಳಾಗುತ್ತಿತ್ತು. ಕೊನೆಗೊಂದು ದಿನ ಪತ್ನಿ ತನಗೆ ಬೆರೆಯವರೊಂದಿಗೆ ಅನೈತಿಕ ಸಂಬಂಧ ಇದ್ದಲ್ಲಿ ಸಾಬೀತು ಪಡಿಸಿ ಎಂದು ಸವಾಲು ಹಾಕಿ, ತವರು ಮನೆಗೆ ತೆರಳಿ ಅಲ್ಲಿ ವಾಸಿಸುತ್ತಿದ್ದಳು. ಬಳಿಕ ತನ್ನ ಪ್ರಿಯಕರನ ಜೊತೆ ತವರು ಮನೆಯಲ್ಲೇ ಅನೈತಿಕ ಸಂಬಂಧ ಮುಂದುವರಿಸಿದ್ದಳು.
ಈ ಕುರಿತು ನಿಗಾ ಇಟ್ಟಿದ್ದ ಪತಿ ಒಂದು ದಿನ ಅವರಿಬ್ಬರನ್ನೂ ರೆಡ್ ಹ್ಯಾಂಡ್ ಆಗಿ ನೋಡಬಾರದ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದ. ಬಳಿಕ ಇಬ್ಬರನ್ನೂ ಮನೆಯಿಂದ ಹೊರಗೆಳೆದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದ. ಈ ವೇಳೆ ಸೇರಿದ ಊರವರು ಬಿಡಿಸಲು ಯತ್ನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದಿದ್ದಾರೆ.