ವಧುವನ್ನು ವೇದಿಕೆಯಲ್ಲಿ ಬಿಟ್ಟು ವರ ಪರಾರಿ- ಅದ್ದೂರಿ ಮದುವೆಗೆ ರೈಡ್ ಆದಾಗ ಕಂಡದ್ದು ಹೀಗೆ....(VIDEO)
Tuesday, May 25, 2021
ಚಿಕ್ಕಮಗಳೂರು:ಕಡೂರು ತಾಲೂಕಿನ ಕರಿಕಲ್ಲಳಿ ಗ್ರಾಮದಲ್ಲಿ ನಡೆಯುತ್ತಿದ್ದ ಅದ್ದೂರಿ ಮದುವೆಗೆ ಅಧಿಕಾರಿಗಳು ರೈಡ್ ಮಾಡಿದಾಗ ವಧುವನ್ನು ವೇದಿಕೆಯಲ್ಲಿ ಬಿಟ್ಟು ವರ ಪರಾರಿಯಾದ ಘಟನೆ ನಡೆದಿದೆ.
ವಧು ವರನ ಮನೆಯವರು ಕೇವಲ 10 ಜನ ಸೇರಿ ಮದುವೆ ಮಾಡುವುದಾಗಿ ಕಡೂರು ತಾಲೂಕಿನ ಜೋಡಿಹಳ್ಳಿ ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದಿದ್ದರು. ಆದರೆ ಮದುವೆ ದಿನದಂದು ಇದನ್ನು ಮುರಿದು ಅದ್ದೂರಿ ಮದುವೆ ಆಯೋಜಿಸಿದ್ದಾರೆ. ಈ ಮದುವೆ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಜನರಿಗಾಗಿ ಕುರ್ಚಿಗಳನ್ನು ಹಾಕಲಾಗಿತ್ತು. ಅದ್ದೂರಿ ಮದುವೆ ವಿಚಾರ ತಿಳಿಯುತ್ತಿದ್ದಂತೆ ಜೋಡಿಹಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳು ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದಾರೆ. ಅಲ್ಲಿ ನೆರೆದಿದ್ದವರನ್ನು ಬೈದು ಮನೆಗೆ ಕಳುಹಿಸಿದ್ದಾರೆ. ಅಧಿಕಾರಿಗಳನ್ನು ಕಾಣುತ್ತಿದ್ದಂತೆಯೇ ವೇದಿಕೆ ಮೇಲಿದ್ದ ವರ ವಧುವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.