-->

Mangalore; ಮೃತ್ಯುಂಜಯ ನದಿಯಲ್ಲಿ ಉಕ್ಕೇರಿದ ನೀರು; ನಡುನೀರಿನಲ್ಲಿ ಸಿಲುಕಿಕೊಂಡ ಪಿಕಪ್ (Video)

Mangalore; ಮೃತ್ಯುಂಜಯ ನದಿಯಲ್ಲಿ ಉಕ್ಕೇರಿದ ನೀರು; ನಡುನೀರಿನಲ್ಲಿ ಸಿಲುಕಿಕೊಂಡ ಪಿಕಪ್ (Video)

 


ಬೆಳ್ತಂಗಡಿ: ತಾಲೂಕಿನ ಕಕ್ಕಿಂಜೆ ಬಳಿ‌ ನದಿಯಲ್ಲಿ  ನೀರಿನ ಸೆಳೆತಕ್ಕೆ ಸಿಲುಕಿ ಪಿಕಪ್ ವಾಹನವೊಂದು ಮುಳುಗಿದ ಘಟನೆ ನಡೆದಿದೆ.




  ಚಾರ್ಮಾಡಿ ಸಮೀಪ  ಉರ್ಪೆಲ್ ಗುಡ್ಡೆ  ಎಂಬಲ್ಲಿ   ಈ ಘಟನೆ ನಡೆದಿದೆ.   ಮೃತ್ಯುಂಜಯ ನದಿಯಲ್ಲಿ  
ಅಳದಂಗಡಿ ಕಡೆಯ ಪಿಕಪ್ ವಾಹನದಲ್ಲಿ ಇಲ್ಲಿನ ಎಂಕೆ ದಯಾನಂದ ಎಂಬವರ ಮನೆಗೆ  ಸೆಂಟ್ರಿಂಗ್ ಸಾಮಗ್ರಿಗಳನ್ನು ಸಾಗಿಸಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಪಿಕಪ್ ವಾಹನ ನದಿಯ ಮಧ್ಯಭಾಗಕ್ಕೆ ಬರುತ್ತಿದ್ದಂತೆಯೇ ಭಾರೀ ಪ್ರಮಾಣದ ನೀರು ಹರಿದಿದೆ.ವಾಹನ ಚಲಾಯಿಸಲು ಸಾಧ್ಯವಾಗದಿದ್ದಾಗ ಅಪಾಯದ ಸೂಚನೆ ಅರಿತು ಪಿಕಪ್ ಚಾಲಕ ಹಾಗೂ ಪಿಕಪ್ ನಲ್ಲಿದ್ದ ಇನ್ನೋರ್ವ ಸೈಡ್ ಗ್ಲಾಸ್ ಹಾಕಿ ಗಾಡಿಯಿಂದ ಇಳಿದು ನದಿಯಿಂದ ಮೇಲೆ ಬಂದಿದ್ದಾರೆ.


ಪಿಕಪ್ ಅಲ್ಲಿಯೇ ಸಿಲುಕಿ ಕೊಂಡಿದ್ದು, ಚಾಲಕ ಮೊಬೈಲ್ ನಲ್ಲಿ ಕರೆಮಾಡಿ ಇತರರಿಗೆ ಮಾಹಿತಿ ನೀಡಿದ್ದು ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ನೀರಿಗೆ ಇಳಿದು ಪಿಕಪ್ ಗೆ ಹಗ್ಗ ಹಾಕಿ ಮರಕ್ಕೆ ಕಟ್ಟಿ ಹಾಕಿದರು. ನೀರಿನ ಮಟ್ಟ ಮತ್ತಷ್ಟು ಮೇಲೇರಿದ್ದು ಪಿಕಪ್ ಮಗುಚಿ ಬಿದ್ದಿದೆ. ಎರಡು ಮೂರು ಪಲ್ಟಿಯಾಗಿ ಹಗ್ಗದ ಸಹಾಯದಿಂದ ನಿಂತಿದೆ.

ಎಸ್.ಕೆ. ಎಸ್.ಎಸ್.ಎಫ್.ನ ವಿಖಾಯ ತಂಡದವರು ಹಗ್ಗ ಹಾಗೂ ರೋಪ್ ತಂದು ಉಕ್ಕಿ ಹರಿಯುತ್ತಿದ್ದ ನದಿಗೆ ಧುಮುಕಿ ಪಿಕಪ್ ನ್ನು ಸಾಹಸಪಟ್ಟು ಎಳೆದು ನದಿಯಿಂದ ಮೇಲೆತ್ತಿದ್ದು ಪಿಕಪ್ ಸಂಪೂರ್ಣ ನುಜ್ಜುಗಿಜ್ಜಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99