Mangalore; ಮಾಸ್ಕ್ ಹಾಕಲು ಹೇಳಿದ್ದೆ ತಪ್ಪಾಯ್ತು, ಪಿಡಿಓಗೆ ಹಲ್ಲೆ ಮಾಡಿದ ಯುವಕರು
Tuesday, May 25, 2021
ಮಾಸ್ಕ್ ಧರಿಸದೆ ಗುಂಪುಗೂಡಿರುವುದನ್ನು ಪ್ರಶ್ನಿಸಿದಕ್ಕೆ ಪಿಡಿಓ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಲ್ಲೂರು ಪಂಚಾಯತ್ ಪಿ. ಡಿ. ಓ ರಾಜೇಂದ್ರ ಶೆಟ್ಟಿಯವರ ಮೇಲೆ ಯುವಕರಿಬ್ಬರು ಹಲ್ಲೆ ನಡೆಸಿದ್ದಾರೆ.
ಮಲ್ಲೂರಿನ ಮೈದಾನವೊಂದರಲ್ಲಿ ಯುವಕರು ಮಾಸ್ಕ್ ಹಾಕದೆ ಗುಂಪು ಸೇರಿದ್ದರು. ಬಳಿಕ ಇದೇ ಗುಂಪು ಪಂಚಾಯತ್ ಗೆ ಬಂದಿತ್ತು. ಅಲ್ಲಿಯೂ ಮಾಸ್ಕ್ ಹಾಕದೆ
ಇರುವುದನ್ನು ಪ್ರಶ್ನಿಸಿದ ಕಾರಣಕ್ಕೆ ಪಿಡಿಓ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ