ಮಂಜೇಶ್ವರದಲ್ಲಿ ಬಿಜೆಪಿ ಸೋಲಲು ಕಾರಣ ಏನು?-ಇಲ್ಲಿದೆ ಹತ್ತು ಅಂಶಗಳು
Sunday, May 2, 2021
ಮಂಜೇಶ್ವರ: ಬಿಜೆಪಿಯ ಪಾಲಿಗೆ ಪ್ರತೀ ಬಾರಿಯೂ ಗೆಲುವು ಸನಿಹಕ್ಕೆ ಬಂದು ಕೈತಪ್ಪುವ ಒಂದು ಕ್ಷೇತ್ರವಾಗಿದೆ ಮಂಜೇಶ್ವರ ವಿಧಾನಸಭಾ ಕ್ಷೇತ್ರ. ಕಳೆದ ಸಾರ್ವಜನಿಕ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿಗೆ ಕೇವಲ 89 ಮತಗಳಿಂದಾಗಿ ಗೆಲುವು ಕೈತಪ್ಪಿತ್ತು.
ಈ ಬಾರಿಯ ಚುನಾವಣೆಯಲ್ಲೂ ತೀವ್ರ ಹಣಾಹಣಿಯ ಹೊರತಾಗಿಯು ಬಿಜೆಪಿ 745 ಮತಗಳ ಅಂತರದಿಂದ ಸೋತಿದೆ.
ಬಿಜೆಪಿಯಿಂದ ಕಣಕ್ಕಿಳಿದಿರುವ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ವಿರುದ್ಧ ಮುಸ್ಲಿಂ ಲೀಗ್‌ನ ಯುವ ಅಭ್ಯರ್ಥಿ ಎಕೆಎಂ ಅಶ್ರಫ್ ಜಯಶಾಲಿಯಾಗಿದ್ದಾರೆ.
ಈ ಬಾರಿಯೂ ಗೆಲುವು ನಿಶ್ಚಿತ ವಾಗಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ಸೋತಿದೆ. ಕನಿಷ್ಠ ಮೂರು ಸಾವಿರ ಮತಗಳ ಅಂತರದಿಂದಾರೂ ಗೆಲುವಿನ ನಿರೀಕ್ಷೆಯಲ್ಲಿದ್ದ ಯುಡಿಎಫ್ ಕೇವಲ ಮೂರಂಕಿಯ (745) ಅಂತರದಿಂದ ಗೆದ್ದಿದೆ.
ಬಿಜೆಪಿ ಸೋಲಿಗೆ ಕಾರಣವೇನು:
1. ಇಲ್ಲಿನ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಎರಡು ಕಡೆಗಳಿಂದ ಸ್ಪರ್ಧಿಸಿದ್ದು.
2. ಎರಡು ಕಡೆ ಸ್ಪರ್ಧೆ ಜನರಿಗೆ ಸೋಲಿನ ಮುನ್ನೆಚ್ಚರಿಕೆ ನೀಡಿತ್ತು.
3. ಎರಡೂ ಕಡೆಯಿಂದ ಗೆದ್ದರೆ ಮಂಜೇಶ್ವರಕ್ಕೆ ರಾಜೀನಾಮೆ ನೀಡಿದರೆ ಮತ್ತೆ ಚುನಾವಣೆಯ ಉಸಾಬರಿ ಬೇಡವೆಂದು ಜನ ಯೋಚಿಸಿದ್ದು.
4. ಮೋದಿ, ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಜನ ಭ್ರಮನಿರಸಗೊಂಡಿದ್ದು.
5. ಕೆ. ಸುರೇಂದ್ರನ್ ಹೊರಗಿನಿಂದ ಬಂದ ಅಭ್ಯರ್ಥಿ ಯಾಗಿದ್ದೂ, ಎಕೆಎಂ ಅಶ್ರಫ್ ಊರಿನವನೇ ಎಂಬ ಬಾವನೆ ಜನರನ್ನು ಯುಡಿಎಫ್ ಗೆ ಮತ ನೀಡಲು ಪ್ರೇರೇಪಿಸಿದ್ದು.
6. ಬಿಜೆಪಿಯ ಗೆಲುವು ಸನಿಹವಿದ್ದರಿಂದ ಜಾತ್ಯಾತೀತ ಮತಗಳು ಒಟ್ಟುಗೂಡಿದ್ದು.
7. ಮುಸ್ಲಿಮರ ಮತಗಳನ್ನೇ ರಾಜಕೀಯಗೊಳಿಸಿ ಚುನಾವಣೆ ಎದುರಿಸುವ ಎಸ್‌ಡಿಪಿಐ ಬಹಿರಂಗವಾಗಿ ಯುಡಿಎಫ್ ಗೆ ಬೆಂಬಲ ಘೋಷಿಸಿದ್ದು.
8. ಎಕೆಎಂ ಅಶ್ರಫ್ ನ ಬಿರುಸಿನ ಪ್ರಚಾರ, ಜನರೊಂದಿಗೆ ಬೆರೆಯುವ ಗುಣ
9. ಸುರೇಂದ್ರನ್ ಗೆ ಕೋನಿ ಸಹಿತ ಇಡೀ ರಾಜ್ಯದ ಬಿಜೆಪಿ ಉಸ್ತುವಾರಿ ಇದ್ದುದರಿಂದ, ಮಂಜೇಶ್ವರದಲ್ಲಿ ಪ್ರಚಾರಕ್ಕೆ ಕಡಿಮೆ ಸಮಯ ಮೀಸಲಿರಿಸಿದ್ದು.
10. ಸ್ಥಳಿಯ ಜನರೊಂದಿಗೆ ಸುರೇಂದ್ರನ್ ಗೆ ಹೆಚ್ವಿನ ಒಡನಾಟ ಇಲ್ಲದಿರುವುದು. ಇಲ್ಲಿನ ಭಾಷೆ ಸಂಸ್ಕೃತಿ ಕುರಿತಂತೆ ಆಸಕ್ತಿ ಕಡಿಮೆ ಇದ್ದದ್ದು