
ಕರ್ನಾಟಕದ ಸಿಂಗಂ ತಮಿಳುನಾಡಿನಲ್ಲಿ ಸೋತ ಬಳಿಕ ಹೇಳಿದ್ದೇನು ಗೊತ್ತಾ?
Monday, May 3, 2021
ಕರ್ನಾಟಕದಲ್ಲಿ ಸಿಂಗಂ ಎಂದು ಮಾಧ್ಯಮಗಳಲ್ಲಿ ಬಿಂಬಿತರಾಗಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನಪ್ಪಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಸೋಲನ್ನಪ್ಪಿದ ಬಳಿಕ ಟ್ವೀಟ್ ಮಾಡಿರುವ ಅವರು ಸೋಲು ಜೀವನದ ಅಂಗವಾಗಿದೆ. ಇಂತಹ ಹಲವು ಸೋಲುಗಳನ್ನು ನೋಡಲಾಗಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಚಿಕ್ಕಮಗಳೂರು, ಉಡುಪಿ , ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಣ್ಣಾಮಲೈ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷ ಸೇರಿದ್ದರು. ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಅವರು ಅರಾವಕುರಿಚ್ಚಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 68 ಸಾವಿರ ಮತಗಳನ್ನು ಪಡೆದ ಅವರು ಡಿಎಂಕೆ ಅಭ್ಯರ್ಥಿ ವಿರುದ್ದ ಸೋಲನ್ನಪ್ಪಿದ್ದರು.