BIG TWIST ಗೆದ್ದು ಸೋತ ದೀದಿ; ನಂದಿಗ್ರಾಮದಲ್ಲಿ ಶಿಷ್ಯ ನೆದುರು ಮಮತಾ ಬ್ಯಾನರ್ಜಿ ಸೋಲು
Sunday, May 2, 2021
ಕೊಲ್ಕತ್ತಾ: ಚುನಾವಣಾ ಪ್ರಚಾರದಲ್ಲಿ ದೀದಿ ಓ ದೀದಿ ಎಂದು ಪ್ರಧಾನಿ ಮೋದಿಯವರಿಂದ ವ್ಯಂಗ್ಯಕ್ಕೊಳಗಾದ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಗೆದ್ದು ಸೋತಿದ್ದಾರೆ.
ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ತನ್ನ ಶಿಷ್ಯ ಸುವೇಂದು ಅಧಿಕಾರಿ ಮುಂದೆ ಸ್ಪರ್ಧಿಸಿದ್ದರು.ತೀವ್ರ ಹಣಾಹಣಿಯ ಬಳಿಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ 1200 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸುವೇಂಧು ಅಧಿಕಾರಿ ವಿರುದ್ಧ ಗೆಲುವು ಸಾಧಿಸಿದ್ದರು ಆದರೆ ಬಳಿಕ ಮರು ಎಣಿಕೆ ನಡೆದಾಗ ಮಮತಾ ಬ್ಯಾನರ್ಜಿ
ಸೋಲನ್ನಪ್ಪಿದ್ದಾರೆ. 1957 ಮತಗಳ ಅಂತರದಿಂದ ಸುವೆಂದು ಅಧಿಕಾರಿ ವಿಜಯ ಸಾಧಿಸಿದ್ದಾರೆ.
ಇಡೀ ಪಶ್ಚಿಮ ಬಂಗಾಳದ ಪ್ರಚಾರದ ನೇತೃತ್ವ ವಹಿಸಿದ್ದ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದ ನಂದಿಗ್ರಾಮ ಕ್ಷೇತ್ರವು ಬಿಜೆಪಿ ಮತ್ತು ಟಿಎಂಸಿಗೆ ಪ್ರತಿಷ್ಠೆಯ ಕ್ಷೇತ್ರವಾಗಿತ್ತು.