Mangalore: ವಿವಾಹಿತ ಮಹಿಳೆಗೆ ನೆರವಾಗುವ ನೆಪದಲ್ಲಿ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ
Saturday, May 22, 2021
ಮಂಗಳೂರು: ಕೌಟುಂಬಿಕ ಸಮಸ್ಯೆಯಿಂದ ಗಂಡನಿಂದ ಬೇರೆಯಾಗಿ ವಾಸಿಸುತ್ತಿದ್ದ ಮಹಿಳೆಯ ಅಸಹಾಯಕತೆಯನ್ನೇ ದುರುಪಯೋಗಪಡಿಸಿಕೊಂಡು ಆಕೆಯನ್ನು ಅತ್ಯಾಚಾರ ಮಾಡಿದಾತನ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಸೂಟರ್‌ಪೇಟೆ ನಿವಾಸಿ, ಎಲ್‌ಐಸಿ ಏಜೆಂಟ್ ಅರುಣ್‌ರಾಜ್ ಸಾಂಸಾರಿಕ ಜೀವನದಿಂದ ದೂರವಿದ್ದ ಮಹಿಳೆಯಗೆ ನೆರವಾಗುವುದಾಗಿ ಆಕೆಯನ್ನು ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮತ್ತು ಬರಿಸುವ ಪಾನೀಯ ನೀಡಿ ಅತ್ಯಾಚಾರ ಮಾಡಿದ್ದಾನೆ. ಯುವತಿಗೆ ಪ್ರಜ್ಞೆ ಬಂದಾಗ ಅತ್ಯಾಚಾರಕ್ಕೊಳಗಾಗಿದ್ದು ಅರಿವಾಗಿದ್ದು, ಬಳಿಕ ಬೊಬ್ಬೆ ಹೊಡೆದಿದ್ದಾಳೆ. ಈ ವೇಳೆ ಅರುಣ್ ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದು, ಬಳಿಕವೂ ಇದೇ ಭರವಸೆಯನ್ನು ಮುಂದಿಟ್ಟು ಆಕೆ ಇರುವಲ್ಲಿಗೆ ಹೋಗಿ ನಿರಂತರ ಅತ್ಯಾಚಾರ ಮಾಡಿದ್ದಾನೆ.
ಇದೀಗ ಅರುಣ್ ಈಗಾಗಲೇ ಮದುವೆ ಆಗಿರುವ ವಿಚಾರ ತಿಳಿದು ಬಂದಿದ್ದು, ಈ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾಳೆ.