ತನಗೆ ಮತ್ತು ತಾಯಿಗೆ ಕಿರುಕುಳ ನೀಡುತ್ತಿದ್ದ ತಾಯಿಯ ಪ್ರಿಯಕರನನ್ನು ಈ ಬಾಲಕ ಮಾಡಿದ್ದೇನೆ ಗೊತ್ತಾ?
Saturday, May 22, 2021
ಅಹಮದಾಬಾದ್: ತನಗೆ ಮತ್ತು ತನ್ನ ತಾಯಿಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ತಾಯಿಯ ಪ್ರಿಯಕರನನ್ನು 14 ವರ್ಷದ ಬಾಲಕ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಇಲ್ಲಿನ ನಗರವೊಂದರಲ್ಲಿ ನಡೆದಿದೆ.
ಈ ಬಾಲಕನ ತಾಯಿ 10 ವರ್ಷಗಳ ಹಿಂದೆ ತನ್ನ ಮಗನೊಂದಿಗೆ ಯುವಕನೋರ್ವನ ಜೊತೆ ಓಡಿ ಹೋಗಿದ್ದು, ಆತನ ಜೊತೆ ಸಂಸಾರ ನಡೆಸುತ್ತಿದ್ದ. ವರ್ಷಗಳ ಬಳಿಕ ಆತ ಈ ಮಹಿಳೆಗೆ ಮತ್ತು ಆತನ ಮಗನಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದ. ಇದರಿಂದ ರೋಸಿ ಹೋದ ಮಹಿಳೆಯ ಮಗ ತನ್ನ ಮಲತಂದೆಯನ್ನು ಬೇರೊಂದು ಸ್ಥಳಕ್ಕೆ ಕರೆದುಕೊಂಡುಹೋಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಇದೀಗ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.