Mangalore- ವಧುವಿನ ಮದುವೆ ಮನೆಯಲ್ಲಿ ಯುವಕರ ಮೆಹಂದಿ ನೃತ್ಯ- ಕೇಸ್ ಬುಕ್! (Video)
Thursday, May 27, 2021
ಮಂಗಳೂರು: ಮದುವೆಗೆಂದು ಅನುಮತಿ ಪಡೆದು ಮೆಹಂದಿ ನೃತ್ಯ ನಡೆಸಿದ ವಧುವಿನ ಮನೆಯವರ ವಿರುದ್ದ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಪಾವೂರಿನಲ್ಲಿ ಶೋಭ ಎಂಬವರು ತಮ್ಮ ಮಗಳು ಕೌಶಲ ಎಂಬಾಕೆಯ ವಿವಾಹ ಕ್ಕೆ ಪಾವೂರು ಗ್ರಾ.ಪಂ ನಿಂದ ಅನುಮತಿ ಪಡೆದಿದ್ದರು. ಕೊರೊನಾ ನಿಯಾಮವಳಿಗಳನ್ನು ಪಾಲಿಸುವಂತೆ ಸೂಚಿಸಿ ಮದುವೆಗೆ ಅನುಮತಿಯನ್ನು ನೀಡಲಾಗಿತ್ತು.
ಮದುವೆ ಮೇ 20 ರಂದು ನಡೆದಿದ್ದು ಅದರ ಮುನ್ನಾ ದಿನ ( ಮೇ 19 ) ರಂದು ಅನುಮತಿ ಇಲ್ಲದಿದ್ದರೂ ಮೆಹಂದಿ ಕಾರ್ಯಕ್ರಮ ಆಯೋಜಿಸಿದ್ದು ಇಂದು ಬೆಳಕಿಗೆ ಬಂದಿದೆ. ಈ ಮೆಹಂದಿ ಕಾರ್ಯಕ್ರಮದಲ್ಲಿ ಯುವಕರು ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರ ಆಧಾರದಲ್ಲಿ ಪಾವೂರು ಪಿಡಿಓ ಸುಧಾರಾಣಿಯವರು ಕೋವಿಡ್ ನಿಯಾಮವಳಿಗಳನ್ನು ಉಲ್ಲಂಘಿಸಿದ ವಿರುದ್ದ ಪ್ರಕರಣ ದಾಖಲಿಸುವಂತೆ ಕೋಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.