-->

ಗಂಡನ ಮೊಬೈಲ್​ ಚೆಕ್​ ಮಾಡೋ ಅಭ್ಯಾಸ ಇದೆಯ- ಇಲ್ಲೊಬ್ಬಳು ಹೆಂಡತಿಗೆ  ಬಿದ್ದಿದೆ  1 ಲಕ್ಷ ರೂಪಾಯಿ ದಂಡ!

ಗಂಡನ ಮೊಬೈಲ್​ ಚೆಕ್​ ಮಾಡೋ ಅಭ್ಯಾಸ ಇದೆಯ- ಇಲ್ಲೊಬ್ಬಳು ಹೆಂಡತಿಗೆ ಬಿದ್ದಿದೆ 1 ಲಕ್ಷ ರೂಪಾಯಿ ದಂಡ!





ಗಂಡನ ಮೊಬೈಲನ್ನು ಕದ್ದು ಮುಚ್ಚಿ ಚೆಕ್ ಮಾಡುವ ಹವ್ಯಾಸ ಇರುವ ಹಲವರಿದ್ದಾರೆ. ಆದರೆ ಕದ್ದು ಮುಚ್ಚಿ ಚೆಕ್ ಮಾಡಿದ್ದು ಮಾತ್ರವಲ್ಲದೆ ಅದರಲ್ಲಿದ್ದ ಮಾಹಿತಿಯನ್ನು ಫಾರ್ವರ್ಡ್ ಮಾಡಿದ ಮಹಿಳೆಯೊಬ್ಬಳಿಗೆ ಕೋರ್ಟ್ 1 ಲಕ್ಷ ದಂಡ ವಿಧಿಸಿದೆ.

ಇದು ಘಟನೆ ನಡೆದಿರುವುದು  ದುಬೈನ ರಾಸ್​ ಅಲ್​ ಖೈಮಾದಲ್ಲಿ . ಇಲ್ಲಿನ ಮಹಿಳೆ ಗಂಡನ ಮೊಬೈಲ್​ ಅನ್ನು ಕದ್ದು-ಮುಚ್ಚಿ ನೋಡಿ ಅದರಲ್ಲಿದ್ದ ಖಾಸಗಿ ವಿಚಾರಗಳನ್ನ ಬಹಿರಂಗ ಮಾಡಿ  ಸಂಕಷ್ಟಕ್ಕೆ ಸಿಲುಕಿದ್ದಾಳೆ. ಗಂಡನ ಮೊಬೈಲ್​ ಚೆಕ್​ ಮಾಡಿ ಆತನ ಖಾಸಗಿತನಕ್ಕೆ ಧಕ್ಕೆ ತಂದ ಪತ್ನಿಗೆ ಅಲ್ಲಿನ ನಾಗರಿಕ  ನ್ಯಾಯಾಲಯ 5,400 ದಿರಾಮ್​ (1 ಲಕ್ಷ ರೂಪಾಯಿ) ದಂಡ ವಿಧಿಸಿದೆ.

 ನನ್ನ ಮೇಲೆ ಅನುಮಾನವಿದ್ದ ಪತ್ನಿ  ಮೊಬೈಲ್​ ಚೆಕ್​ ಮಾಡಿ ಕೆಲವು ಫೋಟೋ ಮತ್ತು ಆಡಿಯೋ ಗಳನ್ನು ಕುಟುಂಬಸ್ಥರಿಗೆ ಫಾರ್ವರ್ಡ್ ಮಾಡಿದ್ದಾಳೆ. ಇದರಿಂದಾಗಿ ನನ್ನ ವೈಯಕ್ತಿಕ ಗೌರವಕ್ಕೆ ಧಕ್ಕೆಯಾಗಿದೆ. ನನಗೆ ಮಾನಹಾನಿ ಆಗಿರುವುದರಿಂದ ಆಕೆಯಿಂದ ಪರಿಹಾರ ಕೊಡಿಸಿ ಎಂದು ಗಂಡ ನ್ಯಾಯಾಲಯದ ಮೆಟ್ಟಿಲೇರಿದ್ದ. ವಾದ-ವಿವಾದ ಆಲಿಸಿದ ಬಳಿಕ ಹೆಂಡತಿಯ ತಪ್ಪು ಸಾಬೀತಾದ ಹಿನ್ನೆಲೆಯಲ್ಲಿ ಗಂಡನಿಗೆ  ಒಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.

 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99