
Mangalore- ವಿದ್ಯುತ್ ಶಾಕ್ ಗೆ 4 ವರ್ಷದ ಮಗು ಮತ್ತು ತಾಯಿ ದುರ್ಮರಣ
Sunday, May 30, 2021
ಬೆಳ್ತಂಗಡಿ: ಮೋಟಾರು ಪಂಪ್ ಸ್ವಿಚ್ ಆನ್ ಮಾಡಲು ಹೋದಾಗ ವಿದ್ಯುತ್ ಶಾಕ್ ತಗುಲಿ ತಾಯಿ ಮತ್ತು ಮಗು ದಾರುಣವಾಗಿ ಮೃತಪಟ್ಟ ಘಟನೆ ಕೊಕ್ಕಡದ ಪಟ್ರಮೆ ಎಂಬಲ್ಲಿ ನಡೆದಿದೆ.
ಪಟ್ರಮೆ ಬಳಿಯ ಕೋಡಂದೂರು ನಿವಾಸಿ ಹರೀಶ್ ಎಂಬವರ ಪತ್ನಿ ಗೀತಾ(30) ಹಾಗೂ ಅವರ ನಾಲ್ಕೂವರೆ ವರ್ಷದ ಮಗು ಭವಿಷ್ ವಿದ್ಯುತ್ ಶಾಕ್ ಗೆ ಮೃತಪಟ್ಟಿದ್ದಾರೆ.
ಗೀತಾರವರು ಮಗು ಭವಿಷ್‌ನನ್ನು ಕೈಯಲ್ಲಿ ಹಿಡಿದುಕೊಂಡು ಮೋಟಾರ್ ಪಂಪ್ ಸ್ವಿಚ್ ಆನ್ ಮಾಡಲು ಹೋಗಿದ್ದರು. ಈ ವೇಳೆ ಅವರಿಗೆ ವಿದ್ಯುತ್ ಶಾಕ್ ಆಗಿದೆ. ತೀವ್ರ ಶಾಕ್ ನಿಂದ ತಾಯಿ, ಮಗು ಸ್ಥಳದಲ್ಲಿ ಮೃತಪಟ್ಟಿದ್ದಾರೆ.