ಹೀರೋ ಜತೆ ಮಲಗು... ಹೀರೋಯಿನಿ ಆಗಲು ಹೋದ ನಟಿಗೆ ಸಿಕ್ಕ ಸಲಹೆ... ಆಕೆ ಮಾಡಿದ್ದೇನು
Sunday, May 30, 2021
ಸಿನಿಮಾದಲ್ಲಿ ನಾಯಕ , ನಾಯಕಿ ಪಾತ್ರ ಒಮ್ಮೆ ಸಿಕ್ಕಿದರೆ ಸಾಕೆಂದು ಹಲವು ನಟನಟಿಯರು ಕಾಯುತ್ತಿರುತ್ತಾರೆ. ಹೀಗೆ ನಾಯಕಿ ಪಾತ್ರ ಮಾಡಬೇಕೆಂಬ ಕನಸು ಕಟ್ಟಿ ಹೋದ ನಟಿಗೆ ಹೀರೋ ಜತೆಗೆ ಮಲಗಲು ಸಲಹೆಯನ್ನು ನಿರ್ದೇಶಕರು ನೀಡಿದ್ದನ್ನು ಹಲವು ವರ್ಷಗಳ ಬಳಿಕ ಕಿಶ್ವರ್ ಮರ್ಚೆಂಟ್ ಬಾಯಿಬಿಟ್ಟಿದ್ದಾರೆ
ನಟಿ ಕಿಶ್ವರ್ ಮರ್ಚೆಂಟ್ ಕಿರುತೆರೆಯಲ್ಲಿ ತನ್ನದೆ ಛಾಪು ಮೂಡಿಸಿದ್ದಾರೆ. ಗರ್ಭಿಣಿಯಾಗಿರುವ ಅವರನ್ನು ಇತ್ತೀಚೆಗೆ ಖಾಸಗಿ ಮಾಧ್ಯಮ ಸಂಸ್ಥೆಯೊಂದು ಇಂಟರ್ವ್ಯೂ ಮಾಡಿದಾಗ ಅವರು ಈ ವಿಚಾರವನ್ನು ಹೇಳಿದ್ದಾರೆ.
ಫೇಮಸ್ ಡೈರೆಕ್ಟರ್ ಒಬ್ಬರ ಹೊಸ ಸಿನಿಮಾಕ್ಕೆ ನಾಯಕಿ ಆಯ್ಕೆ ನಡೆಯುತ್ತಿತ್ತು. ಇದಕ್ಕೆ ಫೇಮಸ್ ಹೀರೋ ಆಯ್ಕೆ ಮಾಡಿದ್ದರು. ಆದರೆ ಆ ಸಿನಿಮಾದಲ್ಲಿ ಹೀರೋಯಿನಿ ಆಗಿ ಅವಕಾಶ ನೀಡಬೇಕಿದ್ದರೆ ಹೀರೋ ಜತೆ ಮಲಗಬೇಕು ಎಂದು ಅವರು ಹೇಳಿದ್ದರಂತೆ. ಆದರೆ ಈ ಆಫರ್ ನ್ನು ನಾನು ತಿರಸ್ಕರಿಸಿ ಬಂದೆ ಎಂದು ಅವರು ಹೇಳಿದ್ದಾರೆ. ಸಿನಿಮಾದ ಮೀಟಿಂಗ್ ವೇಳೆ ನಡೆದ ಈ ಚರ್ಚೆ ವೇಳೆ ನನ್ನ ತಾಯಿಯೂ ನನ್ನ ಜತೆ ಇದ್ದರು ಎಂದು ಅವರು ಹೇಳಿದ್ದಾರೆ.