Sullia- ಈತನದು ಖತರ್ನಾಕ್ ಐಡಿಯ- ಪೊಲೀಸರ ಬಂಧನದ ವೇಳೆ 35 ಗ್ರಾಂ ಚಿನ್ನದ ಉಂಗುರಗಳನ್ನೆ ನುಂಗಿದ ಭೂಪ!
Sunday, May 30, 2021
ಮಂಗಳೂರು: ಜುವೆಲ್ಲರಿ ಶಾಪ್ ನಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಪೊಲೀಸರ ಬಂಧನದ ವೇಳೆ 35 ಗ್ರಾಂ ಚಿನ್ನದ ಉಂಗುರಗಳನ್ನೇ ನುಂಗಿರುವ ಘಟನೆ ನಡೆದಿದೆ.
ಕೇರಳದ ತ್ರಿಶೂರ್ ವಿನ ಶಿಬು ಎಂಬಾತ ಈ ರೀತಿ ಕೃತ್ಯ ಮಾಡಿದಾತ. ಸುಳ್ಯದ ಜುವೆಲ್ಲರಿ ಶಾಪ್ ನಲ್ಲಿ ಚಿನ್ನಾಭರಣ ಕಳವುಗೈದ ಪ್ರಕರಣದಲ್ಲಿ ಮೇ 28 ರಂದು ಇಬ್ಬರು ಆರೋಪಿಗಳನ್ನು ಪೊಲೀಸರು
ಬಂಧಿಸಿದ್ದರು. ಇದರಲ್ಲಿ ಆರೋಪಿ ಶಿಬು ಎಂಬಾತಪೊಲೀಸರ ಕೈಗೆ ಸಿಕ್ಕಿಬೀಳುವುದನ್ನು ತಪ್ಪಿಸಲೆಂದು ಚಿನ್ನದ ಉಂಗುರಗಳನ್ನು ಐಸ್ ಕ್ರೀಂ ಜೊತೆಗೆ ನುಂಗಿದ್ದಾನೆ. ನಿನ್ನೆ ರಾತ್ರಿ 9 ಗಂಟೆಗೆ ತೀವ್ರ ಹೊಟ್ಟೆ ನೋವಿಗೆ ಒಳಗಾಗಿದ್ದು ಕೂಡಲೇ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆತನ ಎಕ್ಸ್ ರೇ ನಡೆಸಿ ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಚಿನ್ನದ ಉಂಗುರ ಇರುವುದು ಪತ್ತೆಯಾಗಿದೆ. ಇಂದು ಬೆಳಗ್ಗೆ ಹೊಟ್ಟೆಯಿಂದ ಹಲವಾರು ಉಂಗುರಗಳನ್ನು ಹೊರತೆಗೆಯಲಾಗಿದ್ದು 35 ಗ್ರಾಮ್ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
.