
Mangalore- ಅರಬ್ಬಿ ಸಮುದ್ರದಲ್ಲಿ 10 ಮೀನುಗಾರರಿದ್ದ ಬೋಟ್ ಇಂಜಿನ್ ವೈಫಲ್ಯ- ಮುಂದೇನಾಯಿತು? video
ಮಂಗಳೂರು; ಮಂಗಳೂರಿನಲ್ಲಿ ಇಂದು ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡು ಮೂಲದ ಬೋಟ್ ನ ಇಂಜಿನ್ ವೈಫಲ್ಯಗೊಂಡು ಅಪಾಯಕ್ಕೆ ಸಿಲುಕಿದ್ದ ಹತ್ತು ಮೀನುಗಾರರನ್ನು ರಕ್ಷಿಸಲಾಗಿದೆ.
ತಮಿಳುನಾಡಿನ Lord of ocean ಎಂಬ ಮೀನುಗಾರಿಕಾ ಬೋಟ್ ಮೀನುಗಾರಿಕಾ ನಡೆಸುತ್ತಾ ಮಂಗಳೂರು ತಲುಪಿದಾಗ ಅದರ ಇಂಜಿನ್ ವೈಫಲ್ಯ ವಾಗಿದೆ. ಇದರಲ್ಲಿ ದ್ದ 10 ಮೀನುಗಾರರ ಜೀವ ಅಪಾಯಕ್ಕೆ ಸಿಲುಕಿತ್ತು.
ಮೀನುಗಾರಿಕಾ ಬೋಟ್ ಇಂಜಿನ್ ವೈಫಲ್ಯ ದ ಮಾಹಿತಿ ಪಡೆದ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿ 10 ಮೀನುಗಾರರನ್ನು ರಕ್ಷಿಸಿದ್ದಾರೆ. ಜೊತೆಗೆ ಅಪಾಯಕ್ಕೆ ಸಿಲುಕಿದ್ದ ಬೋಟನ್ನು ಎಳೆದು ನವಮಂಗಳೂರು ಬಂದರಿಗೆ ತಂದು ಮೀನುಗಾರಿಕಾ ಇಲಾಖೆ ಅಧೀನಕ್ಕೆ ನೀಡಿದ್ದಾರೆ.