ಇದು ಶುದ್ದ ಬಿಜೆಪಿ ಆಗಿ ಉಳಿದಿಲ್ಲ, ಯಡಿಯೂರಪ್ಪ ವಿರುದ್ದ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ ಸಚಿವ ಯೋಗೀಶ್ವರ್
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸರಕಾರವನ್ನು ಉರುಳಿಸಿ ಯಡಿಯೂರಪ್ಪ ನೇತೃತ್ವದ ಸರಕಾರ ಬರಲು ಸಾಕಷ್ಟು ಶ್ರಮವಹಿಸಿದ ಸಚಿವ ಯೋಗೇಶ್ವರ್ ಇದೀಗ ಯಡಿಯೂರಪ್ಪ ಸರಕಾರದ ವಿರುದ್ದವೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಸಚಿವಗಿರಿಯನ್ನು ನನ್ನ ಬದಲು ನನ್ನ ಮಗ ಚಲಾಯಿಸದರೆ ನಾನು ಒಪ್ಪಲ್ಲ. ಅದೇ ರೀತಿ ನನ್ನ ಅಧಿಕಾರದಲ್ಲಿ ಇತರರು ಮೂಗು ತೂರಿಸುವುದು ಇಷ್ಟವಿಲ್ಲ ಎಂದು ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ದ ಅವರು ಗುಡುಗಿದ್ದಾರೆ.
ರಾಜ್ಯದಲ್ಲಿ ಇದೇ ರೀತಿ ನಡೆಯುತ್ತಿದೆ. ಈ ವಿಚಾರವನ್ನು ನಾನು ಸೂಕ್ಷ್ಮವಾಗಿ ಹೇಳಿದ್ದೇನೆ. ಅದನ್ನು ಅರ್ಥ ಮಾಡಿಕೊಳ್ಳಿ. ಇದು ಶುದ್ದ ಬಿಜೆಪಿ ಆಗಿ ಉಳಿದಿಲ್ಲ. ಇಲ್ಲಿ ಮೂರು ಗುಂಪಿನ ಸರಕಾರವಿದೆ. ನಮ್ಮ ಸರಕಾರ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ನಾನು ದೆಹಲಿಗೆ ಹೋಗಿಬಂದದನ್ನು ಮಾಧ್ಯಮದ ಜೊತೆಗೆ ಚರ್ಚೆ ಮಾಡಲು ಆಗುವುದಿಲ್ಲ. ಮುಖ್ಯಮಂತ್ರಿ ಬದಲಾವಣೆ ನನ್ನ ಉದ್ದೇಶವಲ್ಲ.ಅಷ್ಟು ಶಕ್ತಿಯು ನನಗಿಲ್ಲ. ದೆಹಲಿಗೆ ಭೇಟಿ ಕೊಟ್ಟ ವಿಚಾರ ಯಾಕೆ ಇಷ್ಟೊಂದು ಸುದ್ದಿಯಾಯಿತು ಎಂದು ತಿಳಿದಿಲ್ಲ. ನನ್ನ ವಿಚಾರವನ್ನು ಎಲ್ಲಿ ಹೇಳಬೇಕೊ ಅಲ್ಲಿ ಹೇಳ್ತೇನೆ ಎಂದು ಇದೇ ವೇಳೆ ಅವರು ಹೇಳಿದ್ದಾರೆ