Mangalore;ಮಂಡ್ಯಕ್ಕೆ ಕೋಕ್ ಸಲ್ಪರ್ ಸಾಗಿಸುತ್ತಿದ್ದ ಲಾರಿ ಮಂಗಳೂರಿನಲ್ಲಿ ಪಲ್ಟಿ
Thursday, May 27, 2021
ಮಂಗಳೂರು: ಮಂಗಳೂರಿನಿಂದ ಮಂಡ್ಯದ ಮದ್ದೂರಿಗೆ ಕೋಕ್ ಸಲ್ಪರ್ ಕೊಂಡೊಯ್ಯುತ್ತಿದ್ದ ಲಾರಿ ಮಂಗಳೂರಿನಲ್ಲಿ ಪಲ್ಟಿಯಾಗಿ ಡ್ರೈವರ್ ಮತ್ತು ಕ್ಲೀನರ್ ಗೆ ಗಾಯವಾದ ಘಟನೆ ನಡೆದಿದೆ.
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್ ಕ್ರಾಸ್ ಬಳಿ ಲಾರಿ ಬ್ರೇಕ್ ಫೇಲ್ ಆಗಿ ಪಲ್ಟಿ ಹೊಡೆದಿದೆ.ಲಾರಿ ಚಾಲಕ ಪ್ರಮೋದ್ ಮತ್ತು ಕ್ಲೀನರ್ ಕಾರ್ತಿಕ್ ಎಂಬವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನ ಪಣಂಬೂರಿನಿಂದ ಮಂಡ್ಯಕ್ಕೆ ಕೋಕ್ ಸಲ್ಫರ್ ನ್ನು ಈ ಲಾರಿಯು ಸಾಗಿಸುತ್ತಿತ್ತು. ಮಂಗಳೂರಿನ ಪಡೀಲ್ ಕ್ರಾಸ್ ಬಳಿ ಲಾರಿ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಬಡಿದು ರಸ್ತೆಯ ಆಚೆ ಬದಿಗೆ ಮಗುಚಿ ಬಿದ್ದಿದೆ. ಲಾರಿಯಲ್ಲಿದ್ದ ಕೋಕ್ ಸಲ್ಫರ್ ಚೆಲ್ಲಾಪಿಲ್ಲಿಯಾಗಿದ್ದು ಲಾರಿ ಹಿಂಭಾಗದಲ್ಲಿ ಹಾನಿಯಾಗಿದೆ.